Breaking News

ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ: ಕಾಂಗ್ರೆಸ್‌ ಟೀಕೆ

Spread the love

ಬೆಂಗಳೂರು : ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ ಎಂದು ಕರ್ನಾಟಕ ಕಾಂಗ್ರೆಸ್‌ ಸೋಮವಾರ ವಾಗ್ದಾಳಿ ನಡೆಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಈಗಾಗಲೇ ಬೆಲೆ ಏರಿಕೆಯಿಂದ ಜನರ ಬದುಕು ಹೈರಾಣಾಗಿದೆ, ಇದರ ನಡುವೆಯೇ ಕೇಂದ್ರ ಸರ್ಕಾರ ಮತ್ತಷ್ಟು ವಸ್ತುಗಳ ಮೇಲಿನ ಜಿಎಸ್‌ಟಿ ಹೆಚ್ಚಿಸಿ ಜನರ ಬದುಕನ್ನು ಮತ್ತಷ್ಟು ದುಬಾರಿಯಾಗಿಸಿದೆ. ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿ ಸರ್ಕಾರ ಸಾಮಾನ್ಯರ ಮೇಲೆ ತೆರಿಗೆ ಬರೆ ಹಾಕುತ್ತಿದೆ. ಬಿಜೆಪಿ ಉದ್ಯಮಿಗಳ ದಲ್ಲಾಳಿಯೇ ಹೊರತು, ಜನಸಾಮಾನ್ಯರ ಪರವಲ್ಲ’ ಎಂದು ಟೀಕಿಸಿದೆ.

ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಇಂದು (ಸೋಮವಾರ) ಕಾಂಗ್ರೆಸ್‌ ಪಕ್ಷವು ಸೈಕಲ್ ಜಾಥಾ ನಡೆಸಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ