Breaking News

ಟ್ರಕ್ ನಿಂದ ಆಯತಪ್ಪಿ ಬಿದ್ದ ಚಾಲಕ : ಚಿಕಿತ್ಸೆಗಾಗಿ ಸಾರ್ವಜನಿಕ ಆಸ್ಪತ್ರೆಗೆ ರವಾನೆ

Spread the love

ದಾಂಡೇಲಿ : ಸರಕು ತುಂಬಿಕೊಂಡು ಬಂದಿದ್ದ ಟ್ರಕ್ಕನ್ನು ನಿಲ್ಲಿಸಿ, ಸರಕು ಕೆಳಗಿಳಿಸಲು ಕಟ್ಟಲಾದ ಹಗ್ಗವನ್ನು ತೆಗೆಯಲು ಟ್ರಕ್ಕಿನ ಮೇಲೆ ಹತ್ತಿದ್ದ ಚಾಲಕ ಮೇಲಿನಿಂದ ಆಯತಪ್ಪಿ ಬಿದ್ದು ಗಾಯಗೊಂಡ ಘಟನೆ ನಗರದ ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿನಲ್ಲಿ ಗುರುವಾರ ರಾತ್ರಿ ನಡೆದಿದೆ.

ವೆಸ್ಟ್ ಕೊಸ್ಟ್ ಕಾಗದ ಕಾರ್ಖಾನೆಯ ಟಿಂಬರ್ ವಾರ್ಡಿಗೆ ಪೋಲ್ಸ್ ತುಂಬಿಕೊಂಡು ಬಂದಿದ್ದ ಟ್ರಕ್ಕಿನಲ್ಲಿ ಸರಕಿಗೆ ಕಟ್ಟಲಾಗಿದ್ದ ಹಗ್ಗವನ್ನು ಬಿಚ್ಚಲು ಹೋದ ಟ್ರಕ್ಕಿನ ಚಾಲಕ, ಶಿವಮೊಗ್ಗ ಜಿಲ್ಲೆಯ ನಿವಾಸಿಯಾಗಿರುವ 58 ವರ್ಷ ವಯಸ್ಸಿನ ಚಂದ್ರಶೇಖರ.ಎಂ.ಎಸ್ ಅವರು ಆಯತಪ್ಪಿ ಮೇಲಿನಿಂದ ಕೆಳಗೆ ಬಿದ್ದಿದ್ದಾರೆ. ಬಿದ್ದ ಏಟಿಗೆ ಕಣ್ಣು ಮತ್ತು ಕಿವಿಗೆ ಗಾಯವಾಗಿದೆ.

ಘಟನೆ ನಡೆದ ತಕ್ಷಣವೆ ಕಾಗದ ಕಾರ್ಖಾನೆಯ ಆಂಬುಲೆನ್ಸ್ ನಿಂದ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯ್ತು. ಸಾರ್ವಜನಿಕ ಆಸ್ಪತ್ರೆಯಲ್ಲಿ ಗಾಯಗೊಂಡ ಚಂದ್ರಶೇಖರ್.ಎಂ.ಎಸ್ ಅವರಿಗೆ ಚಿಕಿತ್ಸೆ ನೀಡಲಾಗಿದೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ