Breaking News

ಡ್ರಗ್ಸ್ ಆರೋಪಕ್ಕೆ ಅನುಶ್ರೀ ಮೊದಲ ಪ್ರತಿಕ್ರಿಯೆ: ಸಂಬರಗಿ ಬಗ್ಗೆ ಏನೆಂದರು?

Spread the love

​  ಡ್ರಗ್ಸ್     ಕೇಸ್​ಗೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅನುಶ್ರೀ ಹೆಸರು ಮುನ್ನೆಲೆಗೆ ಬಂದಿದೆ. ಅಲ್ಲದೆ, ಅವರು ಮುಂಬೈಗೆ ಹಾರಿದ್ದಾರೆ ಎನ್ನುವ ಮಾತು ಕೇಳಿ ಬಂದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ.

ಅನುಶ್ರೀ ವಿರುದ್ಧ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಸಾಕಷ್ಟು ರೀತಿಯಲ್ಲಿ ಹೇಳಿಕೆಗಳನ್ನು ನೀಡಿದ್ದರು. ಈ ವಿಚಾರದಲ್ಲಿ ಅನುಶ್ರೀ ಸ್ಪಷ್ಟನೆ ನೀಡಿದ್ದಾರೆ. ‘ಪ್ರಶಾಂತ್​ ಸಂಬರಗಿ ಅವರು ಕಾನೂನು ಮೂಲಕ ಹೋಗಲಿ. ನಮ್ಮ ಸಮಾಜದಲ್ಲಿ ಕಾನೂನು ಇದೆ. ಎಲ್ಲ ವಿಚಾರಗಳಿಗೆ ಆಗಲೂ ಉತ್ತರ ಕೊಟ್ಟಿದ್ದೇನೆ, ಈಗಲೂ ಉತ್ತರ ಕೊಡುತ್ತಿದ್ದೇನೆ’ ಎಂದಿದ್ದಾರೆ ಅನುಶ್ರೀ.

‘ನನ್ನ ಬಗ್ಗೆ ಮಾತಾಡುವ ನೂರಾರು ಜನಕ್ಕೆ ಉತ್ತರಿಸಲು ಸಾಧ್ಯವಿಲ್ಲ. ನನ್ನ ವಿರುದ್ಧ ಮಾಡುತ್ತಿರುವ ಎಲ್ಲ ಆರೋಪಗಳು ಸುಳ್ಳು. ಯಾವಾಗ ವಿಚಾರಣೆಗೆ ಕರೆದರೂ ನಾನು ಹೋಗುತ್ತೇನೆ. ಚಾರ್ಜ್​ಶೀಟ್ ಬಗ್ಗೆ ನನಗೆ ಏನೇನೂ ಗೊತ್ತಿಲ್ಲ. ಕಿಶೋರ್ ಶೆಟ್ಟಿಯನ್ನು 12 ವರ್ಷದ ಹಿಂದೆ ನೋಡಿದ್ದೆ. 13 ವರ್ಷ ಹಿಂದೆ ಅವರು ಕೊರಿಯೋಗ್ರಾಫರ್ ಆಗಿದ್ರು. ಆ ರಿಯಾಲಿಟಿ ಶೋನಲ್ಲಿ ನಾನು ವಿನ್ನರ್ ಆಗಿದ್ದೆ. ಆಗ ಪ್ರಾಕ್ಟೀಸ್​ ಮಾಡಲು ಎಲ್ಲರೂ ಒಂದೇ ಕಡೆ ಇದ್ದೆವು’ ಎಂದು ಅನುಶ್ರೀ ಕಿಶೋರ್​ ಶೆಟ್ಟಿ ಪರಿಚಯ ಆಗಿದ್ದು ಹೇಗೆ ಎಂದು ವಿವರಸಿದ್ದಾರೆ


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ