Breaking News

ಕಾಂಗ್ರೆಸ್‌ನ ಸತ್ಯ ಶೋಧನ ವರದಿ : ಅತ್ಯಾಚಾರಕ್ಕೆ ಪೊಲೀಸ್‌ ವೈಫ‌ಲ್ಯ ಕಾರಣ: ತನ್ವೀರ್‌ ಸೇಠ್

Spread the love

ಮೈಸೂರು: ನಗರದಲ್ಲಿ ಇತ್ತೀಚೆಗೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗೃಹ ಸಚಿವರು ಹಾಗೂ ಪೊಲೀಸ್‌ ಇಲಾಖೆಯ ವೈಫ‌ಲ್ಯ ಎದ್ದು ಕಾಣುತ್ತಿದೆ ಎಂದು ಶಾಸಕ ತನ್ವೀರ್‌ ಸೇಠ್ ಹೇಳಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು, ಅತ್ಯಾಚಾರ ಪ್ರಕರಣ ಸಂಬಂಧ ಕಾಂಗ್ರೆಸ್‌ನಿಂದ ನೇಮಕವಾಗಿದ್ದ ಸತ್ಯಶೋಧನ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿ ಮಾತನಾಡಿದರು.

ಅತ್ಯಾಚಾರ ಪ್ರಕರಣ ಸಂಬಂಧ ಸತ್ಯಶೋಧನ ಸಮಿತಿ ಸಂಪೂರ್ಣ ಮಾಹಿತಿ ಕಲೆ ಹಾಕಿ ವರದಿ ಸಿದ್ಧಪಡಿಸಿ, ಹಲವು ಶಿಫಾರಸುಗಳನ್ನು ಮಾಡಿ ಪಕ್ಷದ ನಾಯಕರಿಗೆ ನೀಡಿದ್ದೇವೆ. ಈ ಸಂಬಂಧ ಅಧಿವೇಶನಲ್ಲಿ ಹೋರಾಟವನ್ನು ನಡೆಸುತ್ತೇವೆ ಎಂದು ಹೇಳಿದರು.

ಜಸ್ಟಿಸ್‌ ವರ್ಮಾ ಆಯೋಗದ ವರದಿಯಂತೆ ಪೊಲೀಸರು ಸಂತ್ರಸ್ತೆಗೆ ನೆರವು, ಚಿಕಿತ್ಸೆ ಮತ್ತು ಭದ್ರತೆ ನೀಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈ ಮೂರು ಅಂಶಗಳು ಪಾಲನೆಯಾಗಿಲ್ಲ. ಜತೆಗೆ ಅತ್ಯಾಚಾರ ಪ್ರಕರಣ ಸಂಬಂಧ ಎಫ್‌ಐಆರ್‌ ದಾಖಲಿಸಲು 15 ಗಂಟೆ ಯಾಕೆ ತಡ ಮಾಡಿದರು ಎಂದು ಅವರು ಪ್ರಶ್ನಿಸಿದರು.


Spread the love

About Laxminews 24x7

Check Also

ಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ!

Spread the loveಖಾನಾಪುರ ರಸ್ತೆ ಕಾಮಗಾರಿ ವಿಳಂಬಕ್ಕೆ ಶಾಸಕರ ಅಸಮಾಧಾನ: ಸಚಿವ ಸತೀಶ್ ಜಾರಕಿಹೊಳಿ ಭೇಟಿಯಾದ ಶಾಸಕ ವಿಠ್ಠಲ ಹಲಗೇಕರ! …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ