Breaking News

ಡ್ರಗ್ಸ್​ ಪ್ರಕರಣ; ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ -ಆರಗ ಜ್ಞಾನೇಂದ್ರ

Spread the love

ಬೆಳಗಾವಿ: ಡ್ರಗ್ಸ್ ಕೇಸ್ ಚಾರ್ಜ್​​ಶೀಟ್​ನಲ್ಲಿ ಆಯಂಕರ್ ಅನುಶ್ರೀ ಕೈ ಬಿಡಲಾಗಿದೆಯೇ ಎಂಬ ಪ್ರಶ್ನೆ ಉದ್ಭವಾಗಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, ಯಾರನ್ನು ಬಿಡೋ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಆರಗ ಜ್ಞಾನೇಂದ್ರ ಅವರು, ಡ್ರಗ್ಸ್ ಪ್ರಕರಣದಲ್ಲಿ ಯಾವ ರಾಜಕೀಯ ಒತ್ತಡಗಳು ಇರೋದಿಲ್ಲ. ಡ್ರಗ್ಸ್ ವಿರುದ್ಧ ನಮ್ಮ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಯಾರನ್ನು ಬಿಡುವ ಪ್ರಶ್ನೆ ಇಲ್ಲ, ನಿಜವಾದ ಅಪರಾಧಿಗಳಾದ್ರೆ ಖಂಡಿತ ಶಿಕ್ಷೆಯಾಗುತ್ತೆ ಎಂದರು.

ಪೊಲೀಸರ ಮೇಲೆ ಒತ್ತಡ ಎಂಬುದೆಲ್ಲ ಊಹಾಪೋಹಗಳು, ನಮ್ಮ ಪೊಲೀಸರು ಯಾವ ಒತ್ತಡಗಳಿಗೂ ಮಣಿಯೋದಿಲ್ಲ. ಆರೋಪಿ ಅನುಶ್ರೀ ಹೆಸರು ಹೇಳಿದ ಮೇಲೂ ಅನುಶ್ರೀ ಹೆಸರು ಕೈ ಬಿಡಲಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಯಾರನ್ನು ಬಿಡೋ ಪ್ರಶ್ನೆಯಿಲ್ಲ ಆ ಬಗ್ಗೆ ಮಾಹಿತಿ ತಗೋತಿನಿ ಎಂದರು.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ