Breaking News

ಮಹಾಮಾರಿ ಕೋವಿಡ್‌ಗೆ ಕುಖ್ಯಾತ ರೌಡಿಶೀಟರ್‌ ಬಾಂಬೆ ರವಿ ಬಲಿ

Spread the love

ಬೆಂಗಳೂರು: ಕೊಲೆ, ಕೊಲೆ ಯತ್ನ ಹಾಗೂ ದರೋಡೆ ಸೇರಿದಂತೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಹಲವು ವರ್ಷಗಳಿಂದ ಭೂಗತನಾಗಿದ್ದ ಕುಖ್ಯಾತ ರೌಡಿಶೀಟರ್ ಬಾಂಬೆ ರವಿ ಕೊರೊನಾಗೆ ಬಲಿಯಾಗಿದ್ದಾನೆ‌.

ಹಲವು ವರ್ಷಗಳಿಂದ ದಕ್ಷಿಣ ಆಫ್ರಿಕಾದಲ್ಲಿ ತಲೆಮರೆಸಿಕೊಂಡಿದ್ದ ಬಾಂಬೆ ರವಿಗೆ ಕೋವಿಡ್‌ ಸೋಂಕು ತಗುಲಿ ಸ್ಥಳೀಯ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ‌. ಮೃತ ರೌಡಿಶೀಟರ್‌ ಹಲವು ವರ್ಷಗಳಿಂದ ಬೆಂಗಳೂರು ಪೊಲೀಸರಿಗೆ ತಲೆನೋವಾಗಿದ್ದ. ಭೂಗತನಾಗಿದ್ದುಕೊಂಡೇ ನಗರದಲ್ಲಿ ರೌಡಿ ಚಟುವಟಿಕೆಯಲ್ಲಿ ಪರೋಕ್ಷವಾಗಿ ಭಾಗಿಯಾಗಿದ್ದ.

ಕಳೆದ ವರ್ಷ ನಿರ್ಮಾಪಕ ಉಮಾಪತಿ ಹಾಗೂ ಸಹೋದರ ದೀಪಕ್‌ಗೆ ಕರೆ ಮಾಡಿ ರವಿ ಧಮ್ಕಿ ಹಾಕಿದ್ದ‌. ಅಲ್ಲದೆ ಸುಪಾರಿ ನೀಡಿ ತಮ್ಮ ಸಹಚರರ ಮೂಲಕ ಕೊಲೆಗೂ ಸಂಚು ರೂಪಿಸಿದ್ದ.‌ ಈ ಸಂಬಂಧ ಮಾಹಿತಿ ಆಧರಿಸಿ ಸುಪಾರಿ ಹುಡುಗರನ್ನು ರೆಡ್ ಹ್ಯಾಂಡ್ ಆಗಿ ಜಯನಗರ ಪೊಲೀಸರು ಬಂಧಿಸಿದ್ದರು.

 


Spread the love

About Laxminews 24x7

Check Also

ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ

Spread the love ಮೆಗಾಮಾರ್ಟ್‌‌ನಲ್ಲಿ ಯುವಕರಿಬ್ಬರ ಕಳ್ಳತನ; ಸಿಸಿಟಿವಿಯಲ್ಲಿ ಖದೀಮರ ಕೃತ್ಯ ಸೆರೆ ಮೆಗಾಮಾರ್ಟ್‌ಗೆ ಬಂದಿದ್ದ ಯುವಕರಿಬ್ಬರು ಬೆಲೆಬಾಳುವ ವಸ್ತುಗಳನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ