Breaking News

ಮೂಡಲಗಿ ಅತ್ಯಾಚಾರ ಪ್ರಕರಣ ಕುರಿತು ಜೈ ಭೀಮ್ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ವಾಣಿ ವತಿಯಿಂದ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಕ್ರಮ ಕೈಗೊಳ್ಳುವ ಮನವಿ

Spread the love

ಈ ಮೇಲಿನ ವಿಷಯದಂತೆ ನಾವು ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಮೂಡಲಗಿ ತಾಲೂಕಿನ ರಾಜಾಪೂರ ಗ್ರಾಮದಲ್ಲಿ ಜುಲೈ-2021 ತಿಂಗಳಲ್ಲಿ 16 ವರ್ಷದ ಅಪ್ರಾಪ್ತ ಪರಿಶಿಷ್ಟ ಜಾತಿಯ ಬಾಲಕಿ ಮೇಲೆ 5 ಜನ ಅನ್ಯಜನಾಂಗದ ಕಾಮುಕರು ಸಾಮೂಹಿಕವಾಗಿ ಅತ್ಯಾಚಾರ ಮಾಡಿರುತ್ತಾರೆ. ಬಳಿಕ ಈ ಕೃತ್ಯದ ಬಗ್ಗೆ ಯಾರಿಗಾದರೂ ಹೇಳಿದರೆ ನಿನ್ನನ್ನು ಬಿಡುವುದಿಲ್ಲ ಅಂತಾ ಜೀವ ಬೆದರಿಕೆ ಹಾಕಿದ್ದ ಕಾಮುಕರನ್ನು ಈಗಾಗಲೇ 4 ಜನ ಕಾಮುಕರನ್ನು ಘಟಪ್ರಭಾ ಪೊಲೀಸರು ಬಂಧಿಸಿರುತ್ತಾರೆ. ಇನ್ನುಳಿದ ಕಾಮುಕನನ್ನು ತಕ್ಷಣವೇ ಬಂಧಿಸುವುದಾಗಲೆ ‘ಕು, ಸದರಿ ಬಾಲಕಿಯು ಪರಿಶಿಷ್ಟ ಜಾತಿಯವಳಾಗಿದ್ದ ಕಾರಣ ಸದರಿ ಕುಟುಂಬದವರಿಗೆ ಯಾವುದೇ ರೀತಿಯಿಂದ ಜೀವಕ್ಕೆ ಹಾನಿಯಾಗದಂತೆ ಸುರಕ್ಷತೆ ನೀಡಬೇಕು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಕೃತ್ಯಗಳು ಮೇಲಿಂದ ಮೇಲೆ ಜರುಗುತ್ತಿದ್ದು, ಆದ್ದರಿಂದ ಮಾನ್ಯರು ಇಂತಹ ಘಟನೆಗೆ ಕಾರಣರಾದ ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ನಮ್ಮ ಸಂಘಟನೆಯಿಂದ ವಿನಂತಿಸಲಾಗಿದೆ.

 


Spread the love

About Laxminews 24x7

Check Also

ನಷ್ಟದಲ್ಲಿರುವ ಉದ್ಯಮಗಳಿಗೆ ಡಿಸಿಸಿ ಬ್ಯಾಂಕ್ ಸಾಲ ನೀಡದಂತೆ ಆಗ್ರಹ

Spread the loveಬೆಳಗಾವಿ : ಬಿಡಿಸಿಸಿ ಬ್ಯಾಂಕ್ ಜಿಲ್ಲೆಯಲ್ಲಿ ನಷ್ಟದಲ್ಲಿರುವ ಕೆಲವು ಕಾರ್ಖಾನೆ ಮತ್ತು ಉದ್ಯಮಗಳಿಗೆ ಕೋಟ್ಯಂತರ ರೂಪಾಯಿ ಸಾಲ ಕೊಡಲು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ