Breaking News

ಕೃಷ್ಣಾ ಪ್ರವಾಹಕ್ಕೆ ಬದುಕು ದುಸ್ತರ..

Spread the love

ಬಾಗಲಕೋಟೆ: ಕೃಷ್ಣಾ ನದಿ ಈ ಬಾರಿ ಉಗ್ರ ರೂಪ ತಾಳಿದ ಪರಿಣಾಮ ಪ್ರವಾಹ ಅಕ್ಷರಶಃ ನದಿ ಪಾತ್ರದ ಜನರ ಬದುಕನ್ನು ಬರ್ಬರವಾಗಿಸಿ ಬಿಟ್ಟಿದೆ. ಕಣ್ಣು ಹಾಯಿಸಿದ ಕಡೆಯೆಲ್ಲ ಪ್ರವಾಹ, ಭೀಕರ ಮಳೆ ಜಿಲ್ಲೆಯನ್ನು ಆಘಾತಕ್ಕೆ ತಳ್ಳಿದೆ.

ಪ್ರವಾಹದ ರಣ ಕೇಕೆಗೆ ಗ್ರಾಮಗಳು ಜಲಾವೃತಗೊಂಡರೆ, ಗ್ರಾಮಕ್ಕೆ ಗ್ರಾಮಗಳೆ ನಡುಗಡ್ಡೆಯಾಗಿ ಹೋಗಿವೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ತಮದಡ್ಡಿ ಗ್ರಾಮ ಸಂಪೂರ್ಣ ಜಲಾವೃತಗೊಂಡಿದ್ದು ಅಪಾರ ಹಾನಿ ಉಂಟು ಮಾಡಿದೆ. ಜನಜೀವನವನ್ನು ಸಂಪೂರ್ಣ ಅಸ್ಯವ್ಯಸ್ತಗೊಳಿಸಿದೆ.

ಸಂತ್ರಸ್ಥರಿಗಾಗಿ ಜಿಲ್ಲಾಡಳಿತ ಕಾಳಜಿ ಕೇಂದ್ರ ತೆರೆದಿದ್ದು ತೇರದಾಳದ ನೀಲಕಂಠೇಶ್ವರ ಶಾಲೆಯಲ್ಲಿ ಸದ್ಯ 200 ಕುಟುಂಬಗಳು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿವೆ. ಗುರುಕುಲದಲ್ಲಿ 37 ಕುಟುಂಬಗಳು ಆಶ್ರಯ ಪಡೆಯುತ್ತಿವೆ.


Spread the love

About Laxminews 24x7

Check Also

15 ದಿನದ ಮಗುವಿಗೆ ತಂದೆ ವಿಷಪ್ರಾಶನ ?: ಬಿಕ್ಕಿ ಬಿಕ್ಕಿ ಕಣ್ಣೀರಿಟ್ಟ ತಾಯಿ

Spread the loveಬೆಳಗಾವಿ: ಪ್ರಪಂಚವನ್ನೇ ಕಾಣದ 15 ದಿನದ ಮಗುವಿಗೆ ಪಾಪಿ ತಂದಯೇ ವಿಷಪ್ರಾಶನ ಮಾಡಿದ್ದಾನೆ ಎಂದು ಹೆತ್ತ ತಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ