Breaking News

ಗರ್ಭಿಣಿ ನಿಧನದ ನೋವಲ್ಲೇ ಅಂತ್ಯ ಸಂಸ್ಕಾರ ಮುಗಿಸಿ ಬಂದವರಿಗೆ ಪ್ರವಾಹಕ್ಕೆ ಬಲಿಯಾಗಿತ್ತು ಮನೆ..!

Spread the love

ಬಾಗಲಕೋಟೆ: ಇಷ್ಟು ದಿನ ಕೊರೊನಾ ತನ್ನ ಅಟ್ಟಹಾಸ ಮೆರೆದಿತ್ತು. ಸಾಕಷ್ಟು ಸಾವು ಸಂಭವಿಸಿ ಅದೆಷ್ಟೋ ಜನರ ಬದುಕಲ್ಲಿ ನೋವನ್ನೇ ಉಳಿಸಿ ಹೋಗಿದೆ. ಇದೀಗ ಆರಂಭದ ಮಳೆಯೇ ಪ್ರವಾಹ ಸೃಷ್ಟಿಸಿ ಮತ್ತೆ ಸಾವನ್ನ ಹೆಚ್ಚು ಮಾಡಿದೆ.

ಹೌದು ಜಿಲ್ಲೆಯ ಘಟಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಿರ್ಜಿ ಗ್ರಾಮದ ಲಕ್ಷ್ಮೀ ಎಂಬಾಕೆ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದ್ದಾರೆ. ಜೋರು ಮಳೆಯ ನಡುವೆಯೇ ಹೇಗೋ ಕಷ್ಟಪಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ.

ಆ ಬಳಿಕ ಮನೆಗೆ ಬಂದ್ರೆ ಅಲ್ಲು ಶಾಕ್ ಆಗಿದೆ. ಮೊದಲೇ ನೋವಲ್ಲಿದ್ದವರಿಗೆ ಮನೆ ಸಂಪೂರ್ಣ ಜಲಾವೃತಗೊಂಡಿತ್ತು. ಮನೆಗೆ ಹೋಗಲು ಆಗದೆ ಇಡೀ ಕುಟುಂಬ ನಿರಾಶ್ರಿತರ ಕೇಂದ್ರ ಸೇರಿದೆ. ಇದು ಕುಟುಂಬಕ್ಕೆ ದೊಡ್ಡ ಆಘಾತವನ್ನೇ ಉಂಟು ಮಾಡಿದೆ. ಅಂತ್ಯ ಸಂಸ್ಕಾರದ ಬಳಿಕ ಯಾವ ವಿಧಿ ವಿಧಾನಗಳನ್ನು ಮಾಡಲಾಗದೆ ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.


Spread the love

About Laxminews 24x7

Check Also

ಬಸವೇಶ್ವರ ಪ.ಪೂ ವಾಣಿಜ್ಯ ಮಹಾವಿದ್ಯಾಲಯದ ಫಲಿತಾಂಶ : ಶೇ.88.10%

Spread the loveಬಾಗಲಕೋಟೆ: 2025-26ನೇ ಸಾಲಿನ ಶೈಕ್ಷಣಿಕ ವರ್ಷದ ದ್ವಿತೀಯ ಪಿಯುಸಿಯ ಫಲಿತಾಂಶ ಪ್ರಕಟವಾಗಿದ್ದು, ಮಹಾವಿದ್ಯಾಲಯದ ಕುಮಾರ ಮಂಥನ ಮಹಾವೀರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ