Breaking News

ಮಕ್ಕಳಿಬ್ಬರಿಗೆ ವಿಷವುಣಿಸಿ ಆತ್ಮಹತ್ಯೆಗೆ ಯತ್ನಿಸಿದ ತಂದೆ, ಮಾಟ-ಮಂತ್ರಕ್ಕೆ ಬಲಿಯಾದವ ಮುಗ್ಧ ಹೆಣ್ಣು ಮಕ್ಕಳು?

Spread the love

ಬೆಳಗಾವಿ: ಹೆಣ್ಣು ಮಕ್ಕಳಿಬ್ಬರಿಗೆ ವಿಷವುಣಿಸಿ ತಂದೆಯೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಳಗಾವಿ ತಾಲೂಕಿನ ಕಂಗ್ರಾಳಿ ಕೆ.ಹೆಚ್ ಗ್ರಾಮದಲ್ಲಿ ನಡೆದಿದೆ. ಆದರೆ ಈ ದುರಂತ ಘಟನೆಗೆ ಅಪರಿಚಿತರು ಮಾಡಿಸಿದ ಮಾಟ-ಮಂತ್ರವೇ ಕಾರಣ ಎಂಬ ಹೇಳಿಕೆಗಳು ಕೇಳಿ ಬಂದಿವೆ. ನಾಲ್ಕು ದಿನಗಳ ಹಿಂದೆ ಮನೆಯ ಮುಂದೆ ಮಾಟ-ಮಂತ್ರ ಮಾಡಿಸಿದ್ದ ವಸ್ತುಗಳು ಸಿಕ್ಕಿದ್ದವು. ಇದಾದ ಬಳಿಕ ಅನಿಲ್ ಖಿನ್ನತೆಗೆ ಒಳಗಾಗಿದ್ದ. ಒಂದು ದಿನ ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಬಾಡಿಗೆ ಮನೆಯಲ್ಲಿ ವಾಸವಿದ್ದ ಅನಿಲ್ ಬಾಂದೇಕರ ತನ್ನಿಬ್ಬರು ಹೆಣ್ಣು ಮಕ್ಕಳಾದ ಅಂಜಲಿ(8) ಮತ್ತು ಅನನ್ಯಾ(4)ಗೆ ವಿಷ ನೀಡಿ ಬಳಿಕ ಎಡಗೈ ಕೊಯ್ದುಕೊಂಡು ಮನೆಯ ದೇವರ ಮೂರ್ತಿ ಮೇಲೆ‌ ರಕ್ತ ಸುರಿಸಿ ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಮಕ್ಕಳಿಬ್ಬರೂ ಮನೆಯಲ್ಲೇ ಮೃತಪಟ್ಟಿದ್ದು ಅನಿಲ್ ಜಿಲ್ಲಾಸ್ಪತ್ರೆಯಲ್ಲಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ.

ಘಟನೆ ಹಿನ್ನಲೆ
ಜುಲೈ 11ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಅನಿಲ್ ಮನೆಯ ಮುಂದೆ ಅಪರಿಚಿತರು ಮಾಟ-ಮಂತ್ರ ಮಾಡಿಸಿ ಹೋಗಿದ್ದರಂತೆ. ಎರಡು ನಿಂಬೆಹಣ್ಣು, ಹಸಿರು ಬಳೆಗಳು, ಕುಂಕುಮ, ಮೆಣಸಿನಕಾಯಿ, ಅರಿಶಿಣ, ಗಿಡವೊಂದರ ಬೇರು, ಕೆಂಪು ದಾರ, ಕೆಂಪು ಬಟ್ಟೆ, ಕ್ಯಾರು ಬೀಜ, ಒಂದು ಚೀಟಿ. ಈ ಎಲ್ಲವನ್ನೂ ಒಂದು ಕ್ಯಾರಿ ಬ್ಯಾಗ್ ನಲ್ಲಿಟ್ಟು ಮನೆಯ ಮುಂದೆ ಬೀಸಾಡಿ ಹೋಗಿದ್ದರು. ಇದನ್ನು ಕಂಡು ಅನಿಲ್ ಮತ್ತು ಪತ್ನಿ ಜಯಾ ಬೆಚ್ಚಿ ಬಿದ್ದಿದ್ದರು. ಅನಿಲ್ ಮಾಟ ಮಾಡಿಸಿದ್ದ ಎಲ್ಲಾ ಸಾಮಾಗ್ರಿಗಳನ್ನ ಕೈಯಲ್ಲಿ ಹಿಡಿದು ಸುಟ್ಟು ಹಾಕಿದ್ದ. ಅಂದಿನಿಂದಲೂ ತೀವ್ರ ಒತ್ತಡಕ್ಕೆ ಒಳಗಾಗಿ ವಿಚಿತ್ರವಾಗಿ ಆಡಲು ಶುರುಮಾಡಿದ್ದ. ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಕೆಸಕ್ಕೆ ಹೋಗದಿರುವುದು. ಯಾರ ಜೊತೆಯೂ ಮಾತನಾಡದಿರುವುದು ಹೀಗೆ ಅವರ ಜೀವನ ಶೈಲಿಯೇ ಬದಲಾಗಿತ್ತಂತೆ. ಭಯ ಆಗ್ತಿದೆ, ನನ್ನ ಜೀವಕ್ಕೆ ಎನಾದ್ರೂ ಆಗುತ್ತೆ ಅಂತಾ ಆಗಾಗ ಹೇಳ್ತಿದ್ದನಂತೆ.

ಅನಿಲ್ ಕೆ.ಹೆಚ್. ಕಂಗ್ರಾಳಿ ಗ್ರಾಮದಲ್ಲಿ ತನ್ನ ಮೂವರಿ ಮಕ್ಕಳು ಹಾಗೂ ಪತ್ನಿಯೊಂದಿಗೆ ಬಾಡಿಗೆ ಮನೆಯಲ್ಲಿದ್ದ. ಮಕ್ಕಳ ಕೊಲೆಯಾದ ದಿನ ಪತ್ನಿ ಜಯಶ್ರೀ ತನ್ನ ಪುತ್ರನ ಜೊತೆಗೆ ವಿಜಯನಗರದ ತಾಯಿ ಮನೆಗೆ ತೆರಳಿದ್ದಳು. ಈ ವೇಳೆ ಬೆಡ್ ರೂಂ ಬಾಗಿಲು ಹಾಕಿಕೊಂಡು ಅನಿಲ್ ಈ ಕೃತ್ಯ ಎಸಗಿದ್ದಾನೆ. ಮಾಟ-ಮಂತ್ರಕ್ಕೆ ಎರಡು ಮುಗ್ದ ಜೀವಗಳು ಬಲಿಯಾಗಿವೆ.

ಅಲ್ಲದೆ ಟೈಲ್ಸ್ ಜೋಡಣೆ ಕೆಲಸ ಮಾಡ್ತಿದ್ದ ಅನಿಲ್ ಲಾಕ್ಡೌನ್ನಿಂದಾಗಿ ಕೆಲಸವಿಲ್ಲದೆ‌ ಮನೆಯಲ್ಲಿದ್ದ. ಮನೆಯಲ್ಲಿದ್ದಿದ್ದಕ್ಕೆ ಕೈಯಲ್ಲಿ ದುಡ್ಡು ಇಲ್ಲದೆ ತೀವ್ರ ಒತ್ತಡ ಅನುಭವಿಸುತ್ತಿದ್ದ. ಹೆಂಡತಿ ತವರು ಮನೆ ಸೇರಿದ್ದಕ್ಕೆ ಅಲ್ಲೇ ಹೋಗಿ ಗಂಡ ಅನಿಲ್ ಊಟ ಮಾಡಿಕೊಂಡು ಬರ್ತಿದ್ದ. ಕೆಲಸವಿಲ್ಲ, ಕೈಯಲ್ಲಿ ದುಡ್ಡಿಲ್ಲದ್ದಕ್ಕೆ ಹೆಂಡತಿ ಮಕ್ಕಳನ್ನ ಸಾಕಲು ಆಗಲ್ಲಾ ಅನ್ನುವ ನಿರ್ಧಾರಕ್ಕೆ ಬಂದು ಈ ರೀತಿ ಮಾಡಿಕೊಂಡನಾ ಎಂಬ ಅನುಮಾನ ಸಹ ವ್ಯಕ್ತವಾಗಿದೆ. ಸಾಕಲು ಆಗದೇ ಈ ರೀತಿ ಮಕ್ಕಳನ್ನ ಕೊಂದು ತಾನೂ ಸಾಯಲು ಯತ್ನಿಸಿದ್ನಾ ಎಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಪೊಲೀಸರ ತನಿಖೆಯಿಂದ‌ ಎರಡು ಮುಗ್ದ ಮಕ್ಕಳ ಸಾವಿನ‌ ರಹಸ್ಯ ಹೊರ ಬರಬೇಕಿದೆ‌. ಈ ಕುರಿತು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ