Breaking News

‘ಪೊಲೀಸ್ ಪೇದೆಯ ಎಸ್​ಪಿ ಮಾಡ್ತೀನಿ ಹುಷಾರ್’ -SP ವೇದಮೂರ್ತಿಗೆ ಆರ್​.ಶಂಕರ್ ಎಚ್ಚರಿಕೆ

Spread the love

ಯಾದಗಿರಿ: ಜಿಲ್ಲಾ ಪ್ರವಾಸದಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವ ಆರ್.ಶಂಕರ್, ಎಸ್​ಪಿ ವೇದಮೂರ್ತಿಗೆ ಕ್ಲಾಸ್​​ ತೆಗೆದುಕೊಂಡ ಪ್ರಸಂಗ ನಡೆಯಿತು.

ಜಿಲ್ಲೆಯ ದೋರನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ್ದ ಉಸ್ತುವಾರಿ ಸಚಿವ ಆರ್ ಶಂಕರ್, ಜನರ ಬಳಿ ತೆರಳಿ ಅವರ ಅಹವಾಲುಗಳನ್ನು ಸ್ವೀಕರಿಸುತ್ತಿದ್ದರು. ಈ ವೇಳೆ ಸಚಿವರಿಂದ ದೂರ ನಿಲ್ಲುತ್ತಿದ್ದ ಎಸ್ಪಿ ವೇದಮೂರ್ತಿಯನ್ನು ಕರೆದು ಪಕ್ಕದಲ್ಲಿ ನಿಂತು ಜನರ ಸಮಸ್ಯೆ ಆಲಿಸುವಂತೆ ಹೇಳಿದ್ದಾರೆ.

 

ಹೀಗಿದ್ದರೂ ಮತ್ತೆ ಸಚಿವರಿಂದ ಅಂತರ ಕಾಯ್ದುಕೊಂಡು ದೂರದಲ್ಲಿ ವೇದಮೂರ್ತಿ ನಿಂತಿದ್ದಾರೆ ಎನ್ನಲಾಗಿದೆ. ಇದಕ್ಕೆ ಕೋಪಿಸಿಕೊಂಡ ಸಚಿವರು, ‘ಏ ಎಲ್ಲಿಗೆ ಹೋಗ್ತಿಯಾ..’ ಹೇಳೋದು ಅರ್ಥವಾಗಲ್ವಾ? ಜನರು ಕಷ್ಟ ಹೇಳಿಕೊಳ್ತಿದ್ರೆ ನೀವು ದೂರ ಹೋಗಿ ನಿಲ್ತಿರಾ? ಅರ್ಥವಾಗಲ್ಲೇನ್ರಿ? ನೀವ್ ಹೀಗೆ ಮಾಡಿದ್ರೆ ಪೊಲೀಸ ಪೇದೆಯನ್ನ ಎಸ್​ಪಿ ಮಾಡಿ ಬಿಡ್ತೀನಿ ಹುಷಾರ್’​ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ