Breaking News

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!!

Spread the love

ಕಿತ್ತೂರು ತಾಲೂಕಿನ ವೈದ್ಯರಿಗೆ Thermos ವಿತರಿಸಿ ವೈದ್ಯರ ಸೇವೆಯನ್ನು ಗುಣಗಾನ ಮಾಡಿದ ಪೆಂಡಾಲ್ ಗುತ್ತಿಗೆದಾರ ಪಕ್ಕಿರಪ್ಪ ಮುರಗೋಡ..!!

ಕಿತ್ತೂರು :ಗುರುವಾರ ದಂದು ಕಿತ್ತೂರು ಪಟ್ಟಣದಲ್ಲಿರುವ ಕಲ್ಮಠ ಸಭಾಭವನದಲ್ಲಿ ವೈದ್ಯರ ದಿನಾಚರಣೆ ನಿಮಿತ್ಯ ಸತ್ಕಾರ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು.ರಾಜಗುರು ಸಂಸ್ಥಾನ ಕಲ್ಮಠದ ಶ್ರೀಗಳ ದಿವ್ಯ ಸಾನಿದ್ಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕಿತ್ತೂರು ಕ್ಷೇತ್ರದ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ತಾಲೂಕಿನ ಗಣ್ಯ ವ್ಯಕ್ತಿಗಳು ಮತ್ತು ಪೆಂಡಾಲ್ ಗುತ್ತಿಗೆದಾರರು ಆದ ಪಕ್ಕಿರಪ್ಪ ಮುರಗೋಡ ಅವರು ಆಗಮಿಸಿದ್ದರು.

ಶ್ರೀಗಳು ಹಾಗೂ ಮುಖ್ಯ ಅತಿಥಿಗಳು ದೀಪ ಬೆಳೆಗಿಸುವ ಮೂಲಕ ವೈದ್ಯರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಕಿತ್ತೂರು ತಾಲೂಕಿನಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿನ ವೈದ್ಯರಿಗೆ ಶಾಲು ಹೊದಿಸಿ ಪುಷ್ಪ ಗುಚ್ಛ ನೀಡಿ ಸತ್ಕರಿಸಿದರು.ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶ್ರೀಗಳು ಕೋವಿಡ್ ಅಲೆಯ ನಡುವೆಯೂ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಕಾರ್ಯ ಪ್ರಶಂಸನೀಯ ಎಂದರು.ನಂತರ ಮಾತನಾಡಿದ ತಾಲೂಕಿನ ಗಣ್ಯ ವ್ಯಕ್ತಿಗಳು ಹಾಗೂ ಪೆಂಡಾಲ್ ಗುತ್ತಿಗೆದಾರರು ಆದ ಫಕ್ಕೀರಪ್ಪ ಮುರಗೋಡ ಅವರು ಕೊರೊನಾ ಕಾಲದಲ್ಲಿ ವೈದ್ಯರು ಸಲ್ಲಿಸುತ್ತಿರುವ ಸೇವೆ ಸ್ಮರಣೀಯ ಎಂದು ಗುಣಗಾನ ಮಾಡಿದರು.

ಇದೆ ಸಂದರ್ಭದಲ್ಲಿ ಎಲ್ಲ ವೈದ್ಯರಿಗೆ ಅವರ ಆರೋಗ್ಯದ ಹಿತದೃಷ್ಟಿಯಿಂದ ಹಾಗೂ ತಮ್ಮ ಮಗಳಾದ ವೈಷ್ಣವಿ ಮುರಗೋಡ ರವರಿಗೆ MBBS ನಲ್ಲಿ ಸೀಟ್ ಸಿಕ್ಕಿದ ಕಾರಣ ಪಕ್ಕಿರಪ್ಪ ಮುರಗೋಡ ಅವರು ಎಲ್ಲ ವೈದ್ಯರಿಗೂ ಬಿಸಿನೀರನ್ನು ಸಂಗ್ರಹಿಸಿಡುವ ಥರ್ಮೋಸ್ (thermos) ನೀಡಿದರು.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ