Breaking News

ಮಳೆಯಲ್ಲೇ ʼಆನ್‌ ಲೈನ್ʼ ಕ್ಲಾಸ್‌ ಅಟೆಂಡ್‌ ಮಾಡಿದ ಮಗಳಿಗಾಗಿ ಕೊಡೆ ಹಿಡಿದ ತಂದೆ

Spread the love

ಭಾರೀ ಮಳೆಯ ನಡುವೆಯೇ ಆನ್ಲೈನ್ ಕ್ಲಾಸ್ ಅಟೆಂಡ್ ಮಾಡುತ್ತಿರುವ ಮಗಳಿಗೆ ಅಪ್ಪ ಛತ್ರಿ ಹಿಡಿಯುತ್ತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೆರೆ ಹಿಡಿಯಲಾದ ಈ ಚಿತ್ರದಲ್ಲಿ ರಸ್ತೆ ಬದಿಯಲ್ಲಿ ಮಗಳು ಕುಳಿತು ಕ್ಲಾಸ್ ಅಟೆಂಡ್ ಮಾಡುತ್ತಿದ್ದರೆ, ಅಪ್ಪ ಆಕೆಗಾಗಿ ಛತ್ರಿ ಹಿಡಿದಿದ್ದಾರೆ.

 

ಸುಳ್ಯ ತಾಲ್ಲೂಕಿನ ಬಾಳಕ್ಕ ಗ್ರಾಮದಲ್ಲಿ ಸರಿಯಾಗಿ ಮೊಬೈಲ್ ನೆಟ್ವರ್ಕ್ ಸಿಗದೇ ಇರುವ ಕಾರಣ ವಿದ್ಯಾರ್ಥಿಗಳು ಆಗಾಗ ತಂತಮ್ಮ ಮನೆಗಳಿಂದ ಹೊರಗೆ ಹೋಗಿ ಅಂತರ್ಜಾಲಕ್ಕೆ ಕನೆಕ್ಟ್ ಆಗಬೇಕಾಗುತ್ತದೆ.

ಗುಡ್ಡಗಾಡಿನ ಪ್ರದೇಶದ ವಿದ್ಯಾರ್ಥಿಗಳು ಆನ್ಲೈನ್ ತರಗತಿಗಳನ್ನು ಅಟೆಂಡ್ ಮಾಡಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಎಂಬುದಕ್ಕೆ ಈ ಚಿತ್ರ ಸಾಕ್ಷಿಯಾಗಿದೆ.


Spread the love

About Laxminews 24x7

Check Also

ತೊಂದರೆ ಆದ್ರೆ ಮಾತ್ರ ಕಾಯ್ದೆ ತೋರಿಸುತ್ತೀರಿ, ಅವಘಡ ಆಗಿದ್ರೆ ಯಾರು ಹೊಣೆ? – ದೇವಿಗೆರೆಯಲ್ಲಿ ಗಣೇಶ ವಿಸರ್ಜನೆಗೆ ಡಿಸಿ ಅಸಮಾಧಾನ

Spread the loveಹಾಸನ: ದೇವಿಗೆರೆಯಲ್ಲಿ ಗಣೇಶ ವಿಸರ್ಜನೆ  ವೇಳೆ ಯಾವುದಾದರೂ ಅವಘಡ ಸಂಭವಿಸಿದ್ದರೆ ಜಿಲ್ಲಾಡಳಿತ ಸಮಸ್ಯೆಗೆ ಸಿಲುಕುತ್ತಿತ್ತು. ಅದರ ಹೊಣೆಯನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ