Breaking News

ASI ಮನೆ ಮೇಲಿನ ಎಸಿಬಿ ದಾಳಿ: ₹6 ಕೋಟಿ ಬಂಗಲೆಯಲ್ಲಿ ಎಲ್ಲವೂ ಖಾಲಿ ಖಾಲಿ

Spread the love

ಬೆಂಗಳೂರು: ಉದ್ಯಮಿಯಿಂದ ಲಂಚ ಪಡೆದ ಪ್ರಕರಣ ಸಂಬಂಧ ಕೊಡಿಗೇಹಳ್ಳಿ ಎಎಸ್‌ಐ ದಯಾನಂದಸ್ವಾಮಿ ಮನೆ ಮೇಲೆ ನಿನ್ನೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೇವಲ ಐವತ್ತು ಸಾವಿರ ನಗದು ಪತ್ತೆಯಾಗಿದ್ದು, ಅಧಿಕಾರಿಗಳೇ ಶಾಕ್ ಆಗಿದ್ರು. ಆರು ಕೋಟಿ ಮೌಲ್ಯದ ಬಂಗಲೆಯಲ್ಲಿ ಎಲ್ಲವೂ ಖಾಲಿ ಖಾಲಿಯಾಗಿದ್ದು, ದಯಾನಂದಸ್ವಾಮಿ ದಾಳಿಗೂ ಮುನ್ನವೇ ದಾಖಲೆಗಳನ್ನ ಎಸ್ಕೇಪ್ ಮಾಡಿಸಿರುವ ಅನುಮಾನ ಮೂಡಿದೆ.

ಮನೆಯ ದಾಖಲೆಗಳು, ಹಾಗೂ ಕೆಲವು ವಾಹನಗಳ ದಾಖಲೆಗಳು ಮಾತ್ರ ನಿನ್ನೆ ಪತ್ತೆಯಾಗಿದೆ. ಉಳಿದಂತೆ ಬೇರೆನು ಎಸಿಬಿ ಅಧಿಕಾರಿಗಳಿಗೆ ಸಿಕ್ಕಿಲ್ಲ. ಹೀಗಾಗಿ ದಯಾನಂದಸ್ವಾಮಿ ಬೇನಾಮಿ ಆಸ್ತಿ ಮಾಡಿರುವ ಶಂಕೆ ವ್ಯಕ್ತವಾಗಿದೆ.

 

ಸದ್ಯ ದಯಾನಂದಸ್ವಾಮಿ ತಲೆಮರೆಸಿಕೊಂಡಿದ್ದು, ಎಸಿಬಿ ಅಧಿಕಾರಿಗಳು ಬೇನಾಮಿ ಆಸ್ತಿ ಬಗ್ಗೆ ‌ಮಾಹಿತಿ ಕಲೆ ಹಾಕುತ್ತಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ