Breaking News

“ಮಠಾಧೀಶರು ರಾಜಕೀಯ ಮಾಡುವುದು ಸರಿಯಲ್ಲ”

Spread the love

ಕಲಬುರಗಿ : ಮಠಾಧೀಶರು ರಾಜಕೀಯದಲ್ಲಿ ಮಧ್ಯಪ್ರವೇಶ ಮಾಡುತ್ತಿರುವುದು ಸರಿಯಾದ ಬೆಳವಣಿಗೆಯಲ್ಲ ಎಂದು ಜೇವರ್ಗಿ ತಾಲೂಕಿನ ನೆಲೋಗಿ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪರವಾಗಿ ಮಲೆನಾಡಿನ ಮಠಾಧೀಶರು ಬೆಂಬಲ ನೀಡಿರುವ ಬಗ್ಗೆ ಕಲಬುರಗಿಯಲ್ಲಿ ಪ್ರತಿಕ್ರಿಯೆ ನೀಡಿದ ಶ್ರೀಗಳು, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಯೋಗ್ಯತೆ ಇದ್ದರೆ ಸಿಎಂ ಹುದ್ದೆಯಲ್ಲಿ ಮುಂದುವರೆಯುತ್ತಾರೆ.

ಮಠಾಧೀಶರು ರಾಜಕೀಯ ಮಾಡುವುದು ಸರಿಯಲ್ಲ. ಯಡಿಯೂರಪ್ಪನಿಗೆ ಯೋಗ್ಯತೆ ಇದ್ರೆ ಸಿಎಂ ಹುದ್ದೆಯಲ್ಲಿ ಹೈಕಮಾಂಡ್ ಮುಂದುವರೆಸುತ್ತದೆ. ಅಯೋಗ್ಯ ಇದ್ರೆ ಹೈಕಮಾಂಡ್ ತೆಗೆದು ಹಾಕುತ್ತಾರೆ. ಬಿಜೆಪಿ ಹೈಕಮಾಂಡ್ ಮಠಾಧೀಶರ ಮಾತು ಕೇಳಿ ನಿರ್ಣಯ ಮಾಡೋರಲ್ಲ ಎಂದರು.

ಇನ್ನು ಈ ಹಿಂದೆ ಸಿಎಂ ಆಗಿದ್ದ ವೀರೇಂದ್ರ ಪಾಟೀಲ್ ಅವರನ್ನು ತೆಗೆದಾಗ ಯಾವ ಮಠಾಧೀಶರೂ ಚಕಾರ ಎತ್ತಲಿಲ್ಲ. ಈಗ ಯಡಿಯೂರಪ್ಪ ವಿಷಯ ಬಂದಾಗ ಮಠಾಧೀಶರು ಏಕೆ ಮಧ್ಯ ಪ್ರವೇಶ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ