ಮೂಡಲಗಿ : ಬೆಳಗಾವಿ ಜಿಲ್ಲೆಯ ಮೂಡಲಗಿ ಹೊಸ ತಾಲೂಕಾಗಿ ಮರು ಘೋಷಣೆಯಾದ ಪರಿಣಾಮ ಯುವಕನೋರ್ವ ಒಡೆದ ಗಾಜುಗಳ ಮೇಲೆ ಉರುಳು ಸೇವೆ ಮಾಡಿ ಹರಕೆ ತೀರಿಸಿದ ಘಟನೆ ನಡೆದಿದೆ
ಮೂಡಲಗಿಯ ಯುವಕ ಸುರೇಶ ಬೆಳವಿ ಎಂಬುವವನೇ ಒಡೆದ ಗಾಜಿನ ಮೇಲೆ ಉರುಳು ಸೇವೆ ಮಾಡಿರುವ ಯುವಕ. ಈತ ಮೂಡಲಗಿ ತಾಲೂಕು ಕೇಂದ್ರವಾಗಿ ಘೋಷಣೆಯಾದ್ರೆ ಒಡೆದ ಗಾಜಿನ ಮೇಲೆ ಉರುಳು ಸೇವೆ ಮಾಡುತ್ತೇನೆಂದು ಹರಕೆ ಹೊತ್ತಿಕೊಂಡಿದ್ದನಂತೆ.
ಅದರಂತೆ ಮೂಡಲಗಿ ತಾಲೂಕು ಕೆಂದ್ರವಾದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಶ್ರೀ ಶಿವಭೋಧ ರಂಗ ಸನ್ನಿಧಿಯಲ್ಲಿ ಸುರೇಶ ಗಾಜಿನ ಮೇಲೆ ಉರುಳು ಸೇವೆ ಮಾಡಿ ತನ್ನ ಹರಕೆಯನ್ನು ತೀರಿಸಿಕೊಂಡಿದ್ದಾನೆ