Breaking News

ಸೋಂಕಿತರನ್ನು ಕುಣಿದು, ರಂಜಿಸಿದ ಸಿಎಂ ರಾಜಕೀಯ ಕಾರ್ಯದರ್ಶಿ : ಹೊನ್ನಾಳ್ಳಿಯ ಹೋರಿಯ ಡ್ಯಾನ್ಸ್ ಸಖತ್ ವೈರಲ್.!

Spread the love

ಹೊನ್ನಾಳ್ಳಿ : ಈಗಾಗಲೇ ಅನೇಕ ವಿಷಯಗಳಿಂದ ಸುದ್ದಿಯಾಗಿರುವಂತ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳ್ಳಿಯ ಶಾಸಕ ಎಂ.ಪಿ.ರೇಣುಕಾಚಾರ್ಯ, ಈಗ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕೊರೋನಾ ಸೋಂಕಿತರೊಂದಿಗೆ ಕುಣಿದು ಕುಪ್ಪಳಿಸುವ ಮೂಲಕ, ಅವರನ್ನು ರಂಜಿಸಿ, ಸೋಂಕಿನ ಬಾಧೆಯಿಂದ ಕೆಲಕಾಲ ಮರೆಯುವಂತೆ ಮಾಡಿದ್ದಾರೆ.

ಹೌದು.. ಹೊನ್ನಾಳ್ಳಿಯ ಹೋರಿ ಎಂದು ಸಹ ಪ್ರಸಿದ್ಧವಾಗಿರುವಂತ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರು, ಕೊರೋನಾ ಸೋಂಕಿತರಿಗೆ ಒಂದಷ್ಟು ಉಲ್ಲಾಸಭರಿತರನ್ನಾಗಿ ಮಾಡಿದ್ದಾರೆ. ಅದು ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು ರಿಮೇಕ್ ಹಾಡನ್ನು ಹಾಕಿ, ತಾವು ಸಹ ಕುಣಿಯುವ ಮೂಲಕ, ಸೋಂಕಿತರನ್ನು ಕುಣಿಯುವಂತೆ ಹುರಿದುಂಬಿಸಿ, ಸಂತಸ ಪಡಿಸಿದ್ದಾರೆ.

ಹುಟ್ಟಿದರೇ ಹೊನ್ನಾಳಿಯಲ್ಲಿ ಹುಟ್ಟಬೇಕು ಎನ್ನುವ ರಿಮೇಕ್ ಹಾಡು ಪ್ಲೇ ಆಗುತ್ತಿದ್ದಂತೆ, ತಾವು ಹಾಡಿಗೆ ಸಖತ್ ಹೆಜ್ಜೆ ಹಾಕಿದಂತ ರೇಣುಕಾಚಾರ್ಯ ಅವರು, ಸೋಂಕಿತರನ್ನು ಕರೆದು, ಕುಣಿಯುವಂತೆ ಹುರಿದುಂಬಿಸಿ, ಕುಣಿದು ಕುಪ್ಪಳಿಸಿದ್ದಾರೆ. ಇದೀಗ ಅವರ ಕುಣಿತದ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ