Breaking News

ಕರೆ ಮಾಡಿ ಸಹಾಯ ಕೇಳಿದ ಮಹಿಳೆ, ಮಂಚಕ್ಕೆ ಕರೆದ ಭೂಪ

Spread the love

ಗದಗ: ಗಂಡನಿಗೆ ಕೆಲಸ ಕೊಡಿಸುವಂತೆ ಸಹಾಯ ಕೇಳಿದ ಮಹಿಳೆಯನ್ನು ಮುಖಂಡನೊಬ್ಬ ಮಂಚಕ್ಕೆ ಆಹ್ವಾನಿಸಿದ್ದು, ಪೊಲೀಸರಿಗೆ ದೂರು ನೀಡಲಾಗಿದೆ.

ಗದಗ ತಾಲೂಕಿನ ಹುಯಿಲಗೋಳ ಗ್ರಾಮ ಪಂಚಾಯಿತಿ ಸದಸ್ಯೆಯ ಪತಿ ವಿರುದ್ಧ ಇಂತಹ ಆರೋಪ ಕೇಳಿಬಂದಿದೆ. ಗ್ರಾಮ ಪಂಚಾಯಿತಿಯಲ್ಲಿ 18 ವರ್ಷಗಳಿಂದ ಕೆಲಸ ಮಾಡುತ್ತಿದ್ದ ವ್ಯಕ್ತಿಗೆ ಎರಡು ತಿಂಗಳ ಹಿಂದೆ ಕೈಗೆ ಪೆಟ್ಟಾಗಿ ವಿಶ್ರಾಂತಿ ಪಡೆದಿದ್ದ. ಆತ ಸರಿಯಾಗಿ ಕೆಲಸ ಮಾಡದ ಕಾರಣ ಪಂಚಾಯಿತಿಯವರು ಕೆಲಸಕ್ಕೆ ಸರಿಯಾಗಿ ಬರದಿದ್ದ ಬರಬೇಡ ಎಂದು ಹೇಳಿದ್ದಾರೆ.

ಪಂಚಾಯಿತಿ ಅಧಿಕಾರಿಗಳು ಕೆಲಸಕ್ಕೆ ಬರದಂತೆ ಸೂಚನೆ ನೀಡಿದ್ದರಿಂದ ನೌಕರ ಮನೆಯಲ್ಲೇ ಉಳಿದಿದ್ದಾನೆ. ನೌಕರನ ಪತ್ನಿ ಮುಖಂಡನಾಗಿರುವ ಪಂಚಾಯಿತಿಯ ಸದಸ್ಯೆಯ ಗಂಡನ ಬಳಿ ಕೆಲಸಕ್ಕೆ ಸೇರಿಸುವಂತೆ ಸಹಾಯ ಕೇಳಿದ್ದಾಳೆ. ಆಕೆಯ ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳಲು ಮುಂದಾದ ಮುಖಂಡ ಗಂಡನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಮಂಚಕ್ಕೆ ಆಹ್ವಾನಿಸಿದ್ದಾನೆ. ಕರೆ ಮಾಡಿದ ಮಹಿಳೆಯನ್ನು ಆಹ್ವಾನಿಸಿದ ಆಡಿಯೋ ವೈರಲ್ ಆಗಿದ್ದು, ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹೇಳಲಾಗಿದೆ.


Spread the love

About Laxminews 24x7

Check Also

ಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್!

Spread the loveಬೆಳಗಾವಿ ಪೊಲೀಸರ ಭರ್ಜರಿ ಕಾರ್ಯಾಚರಣೆ; 20 ಬೈಕ್‌ಗಳ ಸಮೇತ ಅಂತರಜಿಲ್ಲಾ ಖದೀಮರ ಗ್ಯಾಂಗ್ ಅರೆಸ್ಟ್! • ಬೃಹತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ