Breaking News

ವಿದ್ಯಾರ್ಥಿನಿ ಸಾವಿಗೆ ಬೆಡ್‌ ಸಿಗದಿರುವುದೇ ಕಾರಣ: ಆರೋಪ

Spread the love

ದಾವಣಗೆರೆ: ಭಾರತ್‌ ಕಾಲೊನಿಯ 17 ವರ್ಷದ ಬಾಲಕಿ ಮಂಗಳವಾರ ಮೃತಪಟ್ಟಿದ್ದಾಳೆ. ಎಲ್ಲ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರೂ ಬೆಡ್‌ ಸಿಗದೇ, ಸಕಾಲದಲ್ಲಿ ಚಿಕಿತ್ಸೆ ಸಿಗದೇ ಇದ್ದಿದ್ದರಿಂದ ಈ ಸಾವು ಉಂಟಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ.

ನಗರದ ಭಾರತ್‌ ಕಾಲೊನಿಯ 12ನೇ ಕ್ರಾಸ್‌ ನಿವಾಸಿ ಮಂಜಪ್ಪ-ವೇಡಿಯಮ್ಮ ದಂಪತಿಯ ಮಗಳು ಸಂಗೀತ ಮೃತಪಟ್ಟವಳು. ಸಂಗೀತಾಳಿಗೆ ಸೋಮವಾರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಗ್ಲುಕೋಸ್‌ ಕೊಡಿಸಿ ಚಿಕಿತ್ಸೆಗಾಗಿ ವಿವಿಧ ಆಸ್ಪತ್ರೆಗೆ ಅಲೆದಾಡಿದ್ದಾರೆ. ಎಲ್ಲಿಯೂ ಬೆಡ್‌ ಸಿಕ್ಕಿಲ್ಲ. ಇದರಿಂದ ಸಂಗೀತ ಮೃತಪಟ್ಟಿದ್ದಾಳೆ ಎಂದು ಸ್ಥಳೀಯ ಮುಖಂಡ ಜಗದೀಶ್‌ ತಿಳಿಸಿದ್ದಾರೆ.

ಎದೆನೋವು, ಉಸಿರಾಟದ ಸಮಸ್ಯೆ ಎಂದ ಕೂಡಲೇ ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳಲು ಹಿಂದೇಟು ಹಾಕಿದ್ದಾರೆ. ಯಾವ ಆಸ್ಪತ್ರೆಯಲ್ಲೂ ಸ್ಪಂದಿಸಿಲ್ಲ. ಬೆಡ್‌ ಸಿಕ್ಕಿದ್ದರೆ ಬದುಕಿ ಉಳಿಯುತ್ತಿದ್ದಳು ಎಂದು ಆಕೆಯ ಮಾವ ಕೆ. ರಾಜ ತಿಳಿಸಿದ್ದಾರೆ.


Spread the love

About Laxminews 24x7

Check Also

ದಾವಣಗೆರೆ, ಬಾಗಲಕೋಟೆ ವಿಧಾನಸಭೆ ಬೈಎಲೆಕ್ಷನ್: ಉಸ್ತುವಾರಿ ಸಮಿತಿ ರಚನೆ; 31 ಜನರಿಗೆ ಜವಾಬ್ದಾರಿ

Spread the loveಬೆಂಗಳೂರು: ದಾವಣಗೆರೆ ಮತ್ತು ಬಾಗಲಕೋಟೆ ವಿಧಾನಸಭೆ ಉಪ ಚುನಾವಣೆ  ಹಿನ್ನೆಲೆ  ಎರಡೂ ಕ್ಷೇತ್ರಕ್ಕೆ ಕಾಂಗ್ರೆಸ್ ಉಸ್ತುವಾರಿ ವೀಕ್ಷಕರ ನೇಮಿಸಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ