Breaking News

ಸೋಲು, ಗೆಲುವನ್ನು ಒಪ್ಪಬೇಕು, ಮಮತಾಗೆ ಕೊಡಬಾರದ ಕಾಟ ನೀಡಿದ್ದರು – ಡಿಕೆಶಿ

Spread the love

ಬೆಂಗಳೂರು: ನಾವು ನೀವೆಲ್ಲಾ ಫಲಿತಾಂಶ ನೋಡ್ತಿದಿವಿ ಸೋಲನ್ನು ಒಪ್ಪಬೇಕು. ಗೆಲುವನ್ನು ಒಪ್ಪಬೇಕು ಇದು ಪ್ರಜಾಪ್ರಭುತ್ವದ ನಿಯಮವಾಗಿದೆ. ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ. ಕಾರ್ಯಕರ್ತರು ಯಾರೂ ಸಂಭ್ರಮ ಮಾಡಬಾರದು ಕೋವಿಡ್ ನಿಯಮ ಪಾಲಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್ ಹೇಳಿದ್ದಾರೆ.

ಬೈ ಎಲೆಕ್ಷನ್ ಚುನಾವಣಾ ಫಲಿತಾಂಶ ವಿಚಾರವಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಸ್ಕಿಯಲ್ಲಿ ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದೇವೆ.

ಮಸ್ಕಿ ಕ್ಷೇತ್ರದ ಅಭ್ಯರ್ಥಿ ತುರುವಿಹಾಳ್‍ಗೆ ಕರೆ ಮಾಡಿ ಅಭಿನಂದನೆ ಹೇಳಿದ್ದೇನೆ. ಯಾರೂ ಸಂಭ್ರಮ ಮಾಡದಂತೆ ಸೂಚನೆ ನೀಡಿದ್ದೇನೆ. ಲಾಕ್‍ಡೌನ್ ಮುಗಿದ ನಂತರ ಬಂದು ಭೇಟಿ ಆಗುವಂತೆ ಸೂಚನೆ ಕೊಡಲಾಗಿದೆ ಎಂದರು.ಹೊರ ರಾಜ್ಯದಲಬಿಜೆಪಿ ಸೋಲು ಡಿಎಂಕೆ ಗೆಲವು ಯಾವುದನ್ನು ಸಂಭ್ರಮಿಸುವುದು ಬೇಡ. ಮಮತಾ ಬ್ಯಾನರ್ಜಿ ಅವರಿಗೆ ಕೊಡಬಾರದ ಕಾಟ ಕೊಟ್ಟರು. ಆ ಶೋಷಣೆ ಇದೆಯಲ್ಲ ಹೇಳಬಾರದು. 8 ಹಂತದಲ್ಲಿ ಚುನಾವಣೆ ಮಾಡಿದರು. ದೇಶದ ಅಧಿಕಾರ ಸರ್ಕಾರ ಎಲ್ಲಾ ದುರ್ಬಳಕೆ ಮಾಡಿಕೊಂಡರು. ಆದರೂ ಪಶ್ಚಿಮ ಬಂಗಾಳದ ಜನ ಅವರ ಕೈ ಹಿಡಿದಿದ್ದಾರೆ ಎಂದರು.


Spread the love

About Laxminews 24x7

Check Also

ಸನ್ನಡತೆ ಆಧಾರದ ಮೇಲೆ ರಾಜ್ಯದ 9 ಜೈಲಿನಿಂದ 31 ಕೈದಿಗಳ ಬಿಡುಗಡೆ

Spread the loveಬೆಂಗಳೂರು: ರಾಜ್ಯದ ವಿವಿಧ ಜೈಲಿನಿಂದ ಸನ್ನಡತೆ ಆಧಾರದ ಮೇಲೆ 31 ಕೈದಿಗಳನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ