Breaking News

ಅಕ್ಕಿ ಕೇಳಿದಕ್ಕೆ ಸಾಯಿ’ ಅಂದು ಟೀಕೆಗೆ ಗುರಿಯಾದ ‘ಸಚಿವ ಉಮೇಶ್ ಕತ್ತಿ’ ರಾಜ್ಯದ ‘ಜನರ ಕ್ಷಮೆ’

Spread the love

ಬೆಂಗಳೂರು : ಅಕ್ಕಿ ಕಡಿತದ ಬಗ್ಗೆ ಬಾಯಿಗೆ ಬಂದಂತೆ ರೈತನ ಜೊತೆಗೆ ಮಾತನಾಡಿದ್ದಂತ ಸಚಿವ ಉಮೇಶ್ ಕತ್ತಿ, ಟೀಕೆಗೆ ಗುರಿಯಾಗಿದ್ದರು. ಈ ಬಗ್ಗೆ ಸ್ವತಹ ಸಿಎಂ ಯಡಿಯೂರಪ್ಪ ಅವರೇ ವಿಷಾದ ವ್ಯಕ್ತ ಪಡಿಸಿದ್ದರು. ಈ ಎಲ್ಲಾ ಘಟನೆ ನಂತ್ರ, ಸಚಿವ ಉಮೇಶ್ ಕತ್ತಿ ರಾಜ್ಯದ ಜನರ ಕ್ಷಮೆಯನ್ನು ಕೇಳಿದ್ದಾರೆ.

ರೈತನ ಜೊತೆಗೆ ಮಾತನಾಡಿದಂತ ಆಡಿಯೋ ವೈರಲ್ ಆಗುತ್ತಿದ್ದಂತೆ, ಸಚಿವ ಉಮೇಶ್ ಕತ್ತಿ ಅಕ್ಕಿ ಕೇಳಿದ ರೈತನಿಗೆ ಸಾಯಲಿ ಅಂತ ಹೇಳಿದ್ದು ವೈರಲ್ ಆಗಿತ್ತು. ಜನರು ಸಚಿವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಕಿಡಿಕಾರಿದ್ದಲ್ಲದೇ, ಕ್ಲಾಸ್ ಕೂಡ ತಗೊಂಡಿದ್ರು. ಸಿಎಂ ವಿಷಯ ತಿಳಿಯುತ್ತಿದ್ದಂತೆ, ವಿಷಾದ ಕೂಡ ವ್ಯಕ್ತ ಪಡಿಸಿದ್ದರು.

ಈ ಬಳಿಕ ತನ್ನ ಮಾತನ್ನು ಮತ್ತೆ ಸಮರ್ಥಿಸಿಕೊಂಡಿದ್ದಂತ ಸಚಿವ ಉಮೇಶ್ ಕತ್ತಿಯ ಬಗ್ಗೆ ರಾಜ್ಯದ ಜನರು, ಸಿಎಂ ಯಡಿಯೂರಪ್ಪ ಕೂಡ ಕ್ಲಾಸ್ ತಗೊಂಡಿದ್ದರು. ಈ ಎಲ್ಲಾ ಟೀಕೆಗಳ ನಂತ್ರ, ಸಚಿವ ಉಮೇಶ್ ಕತ್ತಿ, ರಾಜ್ಯದ ಜನರ ಕ್ಷಮೆಯಾಚಿಸಿದ್ದಾರೆ. ಈ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ