Breaking News

ಹಿಂದೆಲ್ಲ 3 ತಿಂಗಳು ಲಾಕ್‍ಡೌನ್ ಇತ್ತು, ಈಗ ಕೇವಲ 8-10 ದಿನದ ಲಾಕ್‍ಡೌನ್ ಅಷ್ಟೇ ಇದೆ: ಜಗದೀಶ್ ಶೆಟ್ಟರ್

Spread the love

ಧಾರವಾಡ: ಸದ್ಯ ಮೇ 4ರ ವರೆಗೆ ಕಠಿಣ ನಿಯಮ ಜಾರಿಯಲ್ಲಿರುತ್ತದೆ. ಮುಂದಿನ ವಾರವೂ ವೀಕೆಂಡ್ ಕಫ್ರ್ಯೂ ಇರುತ್ತದೆ. ಉಳಿದ ದಿನದ ಕಫ್ರ್ಯೂ, ಲಾಕ್‍ಡೌನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ನಾಳೆಯ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ವಿಸ್ತøತವಾಗಿ ಚರ್ಚೆ ನಡೆಯಲಿದೆ ಎಂದು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಬೆಳಗ್ಗೆ 11ಕ್ಕೆ ಸಚಿವ ಸಂಪುಟ ಸಭೆ ಇದೆ. ಕ್ಯಾಬಿನೆಟ್‍ನಲ್ಲಿ ಚರ್ಚಿಸಿದ ಬಳಿಕ ಸಿಎಂ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತಾರೆ. ಕಟ್ಟುನಿಟ್ಟಿನ ನಿಯಮ ಹಾಕದಿದ್ದರೆ ಕೊರೊನಾ ನಿಯಂತ್ರಣ ಆಗುವುದಿಲ್ಲ. ಧಾರ್ಮಿಕ ಕಾರ್ಯಕ್ರಮ, ಜಾತ್ರೆ, ಮದುವೆಗೆ ಸಾವಿರಾರು ಜನ ಹೊರಡುತ್ತಿದ್ದಾರೆ. ಅದನ್ನು ನಿಯಂತ್ರಿಸಬೇಕಿದೆ ಎಂದರು.

ಕಠಿಣ ನಿಯಮದಿಂದ ವ್ಯಾಪಾರಕ್ಕೆ ತೊಂದರೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಹಿಂದೆಲ್ಲ 3 ತಿಂಗಳು ಲಾಕ್‍ಡೌನ್ ಇತ್ತು, ಈಗ ಕೇವಲ 8-10 ದಿನದ ಲಾಕ್‍ಡೌನ್ ಅಷ್ಟೇ ಇದೆ. ಹಿಂದಿನ ವರ್ಷಕ್ಕಿಂತ ಈಗ ಕೊರೊನಾ ಜಾಸ್ತಿ ಇದೆ ಎಂದರು.


Spread the love

About Laxminews 24x7

Check Also

ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದರ್ಥ: ಶಿವಲಿಂಗೇಗೌಡ ಸ್ಪಷ್ಟನೆ

Spread the loveಹಾಸನ: ಗೌರವಯುತವಾಗಿ ನಡೆದುಕೊಳ್ಳಬೇಕು ಎಂದರೆ ಘರ್ಷಣೆ ಬೇಡ ಎಂದು ಅರ್ಥ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ.ಶಿವಲಿಂಗೇಗೌಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ