Breaking News

ಪ್ರೀತಿಸಿದ ‘ಯುವ ಜೋಡಿ’ಗೆ ಕುಟುಂಬಸ್ಥರೇ ವಿಲನ್ : ‘ಯುವ ಪ್ರೇಮಿ’ಗಳು ಆತ್ಮಹತ್ಯೆಗೆ ಶರಣು

Spread the love

ಹಾವೇರಿ : ನಾಲ್ಕು ವರ್ಷಗಳಿಂದ ಪ್ರೀತಿಸಿದ್ದ ಆ ಇಬ್ಬರು ಯುವ ಪ್ರೇಮಿಗಳು, ಮದುವೆ ಆಗೋದಕ್ಕೂ ನಿರ್ಧರಿಸಿದ್ದರು. ಆದ್ರೇ.. ಕುಟುಂಬಸ್ಥರೇ ವಿಲನ್ ಆಗಿ ಪರಿಣಮಿಸಿ, ಯುವತಿಗೆ ಬೇರೆ ಹುಡುಗನೊಂದಿಗೆ ನಿಶ್ಚಿತಾರ್ಥ ನೆರವೇರಿಸಿದ್ದರು. ಇದರಿಂದ ಮನನೊಂದು ಇಬ್ಬರು ಯುವ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಹಾವೇರಿ ತಾಲೂಕಿನ ನಾನೂರು ಗ್ರಾಮದಲ್ಲಿ ನಡೆದಿದೆ.

ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಇರ್ಷಾದ್ ಕುಡಚಿ ಹಾಗೂ ವಿದ್ಯಾಶ್ರೀ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇರ್ಷಾದ್ ಡಿಪ್ಲೋಮಾ ಮುಗಿಸಿದ್ದರೇ, ವಿದ್ಯಾಶ್ರೀ ಬಿಕಾಂ ಓದ್ತಾ ಇದ್ದರು. ಇಬ್ಬರು ಮದುವೆ ಆಗೋದಕ್ಕೂ ನಿರ್ಧರಿಸಿದ್ದರು. ಆದ್ರೇ.. ಇಬ್ಬರ ಪ್ರೀತಿಯನ್ನು ಕುಟುಂಬಸ್ಥರು ಒಪ್ಪಿಕೊಂಡಿರಲಿಲ್ಲ.

ಇದರ ಮಧ್ಯೆ ಯುವತಿ ವಿದ್ಯಾಶ್ರೀಗೆ ಮನೆಯವರು ಬೇರೊಬ್ಬ ಯುವಕನೊಂದಿಗೆ ನಿಶ್ಚಿತಾರ್ಥ ಮಾಡಿದ್ದರು. ಇದರಿಂದಾಗಿ ಏಪ್ರಿಲ್ 24ರಂದು ಮನೆಯಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಮಹಿಳಾ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ಆದ್ರೇ..ಇಂದು ಇರ್ಷಾದ್ ಕುಟುಂಬಕ್ಕೆ ಸೇರಿದಂತ ಜಮೀನಿನಲ್ಲೇ ಇರ್ಷಾದ್ ಮತ್ತು ವಿದ್ಯಾಶ್ರೀ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ