Breaking News

ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ

Spread the love

ಬೆಂಗಳೂರು, ಏ.21- ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಾಮಾಜಿಕ ಜಾಲತಾಣದಲ್ಲಿ ಮತ್ತೆ ಸಕ್ರಿಯರಾಗಿದ್ದಾರೆ. ಶ್ರೀರಾಮನವಮಿ ಅಂಗವಾಗಿ ರಮೇಶ್ ಜಾರಕಿಹೊಳಿ ಅವರ ಟ್ವಿಟರ್ ಖಾತೆಯಲ್ಲಿ ಶುಭಾಶಯ ತಿಳಿಸಲಾಗಿದೆ. ಫೆ.18ರಿಂದ ನಿಷ್ಕ್ರಿಯವಾಗಿದ್ದ ಟ್ವಿಟರ್ ಖಾತೆ ಇಂದು ಬೆಳಗ್ಗೆ ಸಕ್ರಿಯವಾಗಿದೆ. ಸಿಡಿ ಪ್ರಕರಣದಲ್ಲಿ ಸಿಲುಕಿದ ರಮೇಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದಂತೆ ಅಜ್ಞಾತವಾಸಕ್ಕೆ ತೆರಳಿದ್ದರು.

ನ್ಯಾಯಾೀಶರ ಮುಂದೆ ಯುವತಿ ಹೇಳಿಕೆ ನೀಡಿದ ಬಳಿಕ ರಮೇಶ್ ಜಾರಿಕಿಹೊಳಿ ಬೆಳಗಾವಿ ಸೇರಿಕೊಂಡಿದ್ದು, ಕೊರೊನಾ ಸೋಂಕು ತಗುಲಿದೆ ಎಂದು ಚಿಕಿತ್ಸೆ ಪಡೆದು ಹೋಮ್‍ಕ್ವಾರಂಟೈನ್‍ನಲ್ಲಿ ಇದ್ದಾರೆ. ಈ ಸಂದರ್ಭದಲ್ಲಿ ಅವರ ಟ್ವಿಟರ್ ಖಾತೆ ಸಕ್ರಿಯವಾಗಿರುವುದು ಆಶ್ವರ್ಯ ಮೂಡಿಸಿದೆ.


Spread the love

About Laxminews 24x7

Check Also

ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನದ ಪೂರ್ವಭಾವಿ ಸಭೆ

Spread the loveಬೆಳಗಾವಿ: ನವದೆಹಲಿಯ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು ಕೃಷಿ ಕ್ಷೇತ್ರದಲ್ಲಿನ ಮಕ್ಕಳ ಬಳಕೆ ಕುರಿತ ಅಧ್ಯಯನಕ್ಕಾಗಿ ಬೆಳಗಾವಿ ಜಿಲ್ಲೆಯನ್ನು ಪ್ರಾಯೋಗಿಕವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ