Breaking News

ಕೊರೋನದಿಂದ ಮಿತಿಮೀರಿದ ಸಾವು; ಸುಟ್ಟು ಭಸ್ಮವಾಯಿತು ವಿದ್ಯುತ್ ಚಿತಾಗಾರ ಮಷಿನ್

Spread the love

ಸೊಲ್ಲಾಪುರ: ಮಹಾಮಾರಿ ಕೊರೋನಾದಿಂದಾಗಿ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲಿ ಸತ್ತವರ ಶವ ಸುಡಲು ಇದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಘಟನೆ ಮಹಾರಾಷ್ಟ್ರದ ಸೊಲ್ಲಾಪುರ ನಗರದಲ್ಲಿ ಇಂದು ನಡೆದಿದೆ. ಹೀಗಾಗಿ ಶವಗಳನ್ನ ಸುಡೋದಕ್ಕೂ ಸೊಲ್ಲಾಪುರ ಮಹಾನಗರ ಪಾಲಿಕೆ ಅಧಿಕಾರಿಗಳು ಪರದಾಟ ನಡೆಸುತ್ತಿದ್ದಾರೆ.

ಸೊಲ್ಲಾಪುರ ನಗರದಲ್ಲಿ ಡೆಡ್ಲಿ ಕೊರೋನಾದಿಂದ ಪ್ರತಿನಿತ್ಯ 30ಕ್ಕೂ ಅಧಿಕ ಜನರ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿದು ಬಂದಿದೆ. ನಗರದಲ್ಲಿದ್ದ ವಿದ್ಯುತ್ ಚಿತಾಗಾರದ ಮಷಿನ್‌ ಸುಟ್ಟುಹೋದ ಪರಿಣಾಮ ಗ್ಯಾಸ್ ಘಟಕದ ಮೂಲಕ ಶವಗಳನ್ನ ಸುಡಲಾಗುತ್ತಿದೆ ಎಂದು ವಿದ್ಯುತ್ ಚಿತಾಗಾರ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.

ವಿದ್ಯುತ್ ಚಿತಾಗಾರದ ಮಷಿನ್ ಸುಟ್ಟುಹೋಗಿ 18-20 ಗಂಟೆ ಅಗಿದೆ.ಹೀಗಾಗಿ ಹಳೆ ಪದ್ದತಿಯಂತೆ ಗ್ಯಾಸ್ ಘಟಕದ ಮೂಲಕ ಶವಸಂಸ್ಕಾರ ನೆರವೇರಿಸಲಾಗುತ್ತಿದೆ.

ಕೊರೋನಾ ಎರಡನೇ ಅಲೆ ಹಾವಳಿಗೆ ಸೊಲ್ಲಾಪುರದಲ್ಲಿ ಯುವಕ ಯುವತಿಯರೇ ಹೆಚ್ಚಾಗಿ ಸಾವನ್ನಪ್ಪುದ್ದಾರೆ ಎಂದು ತಿಳಿದುಬಂದಿದೆ.

ಮಹಾರಾಷ್ಟ್ರದಲ್ಲಿ ಮಹಾಮಾರಿ ಕೊರೋನಾ ಆರ್ಭಟ ಬಲು ಜೋರಾಗಿದೆ. ವೈರಸ್‌ ದಾಳಿಯಿಂದ ರಕ್ಷಿಸಿಕೊಳ್ಳಲು ರಾಜ್ಯ ಸರ್ಕಾರ 15 ದಿನ ಮಹಾರಾಷ್ಟ್ರದಲ್ಲಿ ಜನತಾ ಕರ್ಫ್ಯೂ ಜಾರಿಗೊಳಿಸಿದೆ. ಅದ್ರೂ ಕೂಡ ಡೆಡ್ಲಿ ವೈರಸ್‌ ಮಾತ್ರ ತನ್ನ ಅಟ್ಟಹಾಸವನ್ನ ನಿಲ್ಲಿಸುತ್ತಿಲ್ಲ.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ