Breaking News

ರಮೇಶ್ ಜಾರಕಿಹೊಳಿ ನೋಡಲು ಗೋಕಾಕ ಗೆ ಬಂದ S.I.T.ಅಧಿಕಾರಿ

Spread the love

ಗೋಕಾಕ್​ (ಏ. 6):  ಕೊರೋನಾ ಹಿನ್ನಲೆ ಉಸಿರಾಟದ ಸಮಸ್ಯೆಯಿಂದಾಗಿ ಐಸಿಯುನಲ್ಲಿ ದಾಖಲಾಗಿರುವ  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮೂರನೇ ದಿನದ ಚಿಕಿತ್ಸೆ ಮುಂದುವರೆದಿದೆ. ಆಸ್ಪತ್ರೆಗೆ ದಾಖಲಾದ ಹಿನ್ನಲೆ ಎಸ್​ಐಟಿ ವಿಚಾರಣೆಗೆ ರಮೇಶ್​ ಜಾರಕಿಹೊಳಿ ಗೈರಾಗಿದ್ದರು. ಈ ಹಿನ್ನಲೆ ಇಂದು ಎಸ್​ಐಟಿ ತಂಡ ಆಸ್ಪತ್ರೆಗೆ ಭೇಟಿ ನೀಡಿ ರಮೇಶ್​ ಜಾರಕಿಹೊಳಿ ಆರೋಗ್ಯದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ. ರಮೇಶ್​ ಜಾರಕಿಹೊಳಿ ಅವರು ಎಸ್​ಐಟಿ ತನಿಖೆಯಿಂದ ತಪ್ಪಿಸಿಕೊಳ್ಳಲು ಕೊರೋನಾ ಸುಳ್ಳು ನೆಪ ಹೇಳುತ್ತಿದ್ದಾರೆ ಎಂದು ಸಿಡಿ ಪ್ರಕರಣದ ಸಂತ್ರಸ್ತೆ ಪರ ವಕೀಲರು ಆರೋಪಿಸಿದ್ದರು. ಈ ಬೆನ್ನಲ್ಲೆ ಮಾಜಿ ಸಚಿವರು ಗೋಕಾಕ್​ ತಾಲೂಕು ಆಸ್ಪತ್ರೆಯ ಐಸಿಯು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಈ ಬೆಳವಣಿಗೆ ಕುರಿತು ಮಾಹಿತಿ ಕಲೆ ಹಾಕಲು ಎಸ್​ಐಟಿ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದರು.  

ಬೆಂಗಳೂರಿನಿಂದ ಆಗಮಿಸಿದ್ದ ಇಬ್ಬರು ಅಧಿಕಾರಿಗಳು ಗೋಕಾಕ್ ನ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ  ಜೊತೆಗೆ ಸುಮಾರು ಒಂದು ಗಟೆಗಳ ಕಾಲ ಚರ್ಚೆ ನಡೆಸಿದ್ದಾರೆ. ಚರ್ಚೆ ವೇಳೆ ಚಿಕಿತ್ಸೆಯ ಕುರಿತು ಸಂಪೂರ್ಣ ಮಾಹಿತಿಯನ್ನು ಅಧಿಕಾರಿಗಳು ಪಡೆದರು. ಈ ವೇಳೆ ಮಾಜಿ ಸಚಿವರು ಕೊವೀಡ್​ ವರದಿಯನ್ನು ಪರಿಶೀಲಿಸಲಾಗಿದ್ದು, ಕೆಲವು ಚಿಕಿತ್ಸೆ ದಾಖಲೆಗಳನ್ನು ಪಡೆದುಕೊಂಡರು.

ಅಧಿಕಾರಿಗಳ ಭೇಟಿ ಬಳಿಕ ಮಾತಾನಾಡಿದ ಡಾ, ರವೀಂದ್ರ, ಮಾಜಿ ಸಚಿವರು ಆಸ್ಪತ್ರೆಯಿಂದ ಬಿಡುಗಡೆಗೂ ಮುನ್ನ ಎಸ್​ಐಟಿ ತಂಡಕ್ಕೆ ಮಾಹಿತಿ ನೀಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ ಎಂದು ತಿಳಿಸಿದರು.

ಮುಂದುವರೆದ ಚಿಕಿತ್ಸೆ:

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್​ ಜಾರಕಿಹೊಳಿ ಇನ್ನೂ ಎರಡೂ ವಾರ ಎಸ್.ಐ.ಟಿ ಮುಂದೆ ಹಾಜರಾಗುವುದು ಅನುಮಾನ ಎನ್ನಲಾಗುತ್ತಿದೆ. ರಮೇಶ್  ಸಂಪೂರ್ಣ ಚೇತರಿಸಿಕೊಂಡಿಲ್ಲ.  ಆಸ್ಪತ್ರೆಯಿಂದ ಡಿಸ್ಟಾರ್ಜ್ ಆದರೂ ಎರಡು ವಾರಗಳ ವರೆಗೂ ಕ್ವಾರಂಟೈನ ನಲ್ಲಿ ಅವರು ಇರಬೇಕಾಗುತ್ತದೆ.  ರಮೇಶ್​ ಜಾರಕಿಹೊಳಿ ಅವರಿಗೆ ಇನ್ನು ಬಿಪಿ, ಶುಗರ್ ಕಂಟ್ರೋಲ್ ಗೆ ಬಂದಿಲ್ಲ, ಈಗಲೂ ಸ್ವಲ್ಪ ಉಸಿರಾಟದ ತೊಂದರೆಯನ್ನು ಅವರು ಅನುಭವಿಸುತ್ತಿದ್ದಾರೆ. ಐದು ದಿನಗಳ ಬಳಿಕ ಟ್ರೀಟ್ ಮೆಂಟ್ ಸಂಪೂರ್ಣ ಆಗಲಿದೆ. ಎರಡು ವಾರಗಳ ಬಳಿಕ ಮತ್ತೆ ಕೊರೋನಾ ಪರೀಕ್ಷೆಗೆ ಅವರನ್ನು ಒಳಪಡಿಸಲಾಗುವುದು. ಆ ವರದಿಯಲ್ಲಿ ನೆಗಟಿವ್​ ಬಂದ ಬಳಿಕವೇ ಅವರು ಹೊರಗಡೆ ಓಡಾಡಲು ಸಾಧ್ಯ ಎಂದು ಡಾ. ರವೀಂದ್ರ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಅವರ್ ಟ್ರಾವೆಲ್ ಹಿಸ್ಟರಿ ಹಾಗೂ ತನಿಖೆಗೆ ಬೇಕಾದ ಇನ್ನಿತರ ವಿಷಯಗಳ ಮಾಹಿತಿ ಕೂಡ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ ಈ ಒಂದು ವಿಷಯದ ನಂತರ ಸುಖ ಸುಮ್ಮನೆ ಊಹಾ ಪೋಹ ಗಳನ್ನ ಹಬ್ಬಿಸುತ್ತಿರುವವರ ಬಾಯಿಗೆ ಬೀಗ ಹಾಕಿದಂತಾಗಿದೆ ಎಂದು ಅವರ ಅಭಿಮಾನಿಗಳು ಮಾತನಾಡುತ್ತಿದ್ದಾರೆ.

 

 

 


Spread the love

About Laxminews 24x7

Check Also

ಸಾವಳಗಿಯಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಅದ್ದೂರಿ – ಅಡ್ಡ ಪಲ್ಲಕ್ಕಿ ಉತ್ಸವಕ್ಕೆ ಭಕ್ತರ ಅಪಾರ ಸ್ಪಂದನೆ

Spread the loveಗೋಕಾಕ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಶ್ರೀ ಶಿವಲಿಂಗೇಶ್ವರ ಜಾತ್ರಾ ಮಹೋತ್ಸವ ಹಾಗೂ ಅಡ್ಡ ಪಲ್ಲಕ್ಕಿ ಉತ್ಸವದಲ್ಲಿ ಶೂನ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ