Breaking News

ಕನ್ನಡ ದ್ರೋಹಿ MES ನಿಷೇಧಿಸಿ: ಶುಭಂ ಸೆಳಕೆ ಗಡಿಪಾರು ಮಾಡಿ ಎಂದು ಕನ್ನಡ ಸಂಘಟನೆ ಆಗ್ರಹ..

Spread the love

ಘಟಪ್ರಭಾ: ಬೆಳಗಾವಿಯಲ್ಲಿ ಇರುವ ಕನ್ನಡ ನಾಡ ದ್ರೋಹಿ
ಶುಭಂ ಸೆಳಕೆ ಇತನು ಕನ್ನಡದ ಶಾಲು ಹಾಕಿಕೊಂಡು ಅಲೆದಾಡುವವರ ವಿರುದ್ಧ ಅಟ್ಟಿಸಿಕೊಂಡು ಹೊಡೆಯುವ ಕನ್ನಡಿಗರಿಗೆ ಬೆದರಿಕೆ ಹಾಕಿದ್ದಾನೆ ಎಂದು ಕನ್ನಡ ಪರ ಸಂಘಟನೆಗಳು ಆಕ್ರೋಶಿಸಿ ಇಂದು ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಮೃತ್ಯುಂಜಯ ಸರ್ಕಲನಲ್ಲಿ ಪ್ರತಿಭಟನೆ ಮಾಡಲಾಯಿತು.

ಶ್ರೀಶೈಲ ಬ್ಯಾಕೂಡ ನಿರೀಕ್ಷಕರು, ಘಟಪ್ರಭಾ ಪೋಲಿಸ್ ಠಾಣೆ ಇವರ ಮುಖಾಂತರ ಲಕ್ಷ್ಮಣ ಣ ನಿಂಬರಗಿ ಪೋಲಿಸ್ ಅಧಿಕ್ಷಕರು ಬೆಳಗಾವಿ ಅವರಿಗೆ ಮನವಿ ನೀಡಲಾಯಿತು.

ಮಾದ್ಯಮದ ಜೊತೆಗೆ ಮಾತನಾಡಿ ರಾಜ್ಯಧ್ಯಕ್ಷರು ಎಲ್ಲ ಕನ್ನಡಿಗರಿಗೆ ಮನಸ್ಸಿಗೆ ನೋವಾಗಿದ್ದು ಇದರಿಂದ ಜಿಲ್ಲೆಯ ಗಡಿಯಲ್ಲಿರುವ ಬಾಷಾ ವಿಷ ಬೀಜ ಬಿತ್ತುವ ಮೂಲಕ ತನ್ನ ದುರಹಂಕಾರ ವರ್ತನೆ ಮರೆದಿದ್ದಾನೆ. ಅಲ್ಲದೆ ಶಾಂತಿ ಇಂದ ಬಾಳುತ್ತಿರುವರುವ ಕನ್ನಡದ ಮರಾಠಿಗರನ್ನು ಪ್ರಚೋದಿಸುವ ಕೆಲಸ ಮಾಡಿದ್ದಾನೆ ಈ ತರಹದ ವ್ಯಕ್ತಿಗಳಿಂದ ಗಡಿಯಲ್ಲಿ ಶಾಂತಿ ಕದಡುತ್ತಿದ್ದು ಕಾರಣ ಈ ಎಮ್.ಇ.ಎಸ್. ಸಂಘಟನೆಯನ್ನು ಕರ್ನಾಟಕದಲ್ಲಿ ನಿಷೇಧಿ, ಈತನನ್ನು ರಾಜ್ಯದಿಂದ ಗಡಿಪಾರು ಮಾಡಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಎಂದು ಕೇಳಿಕೊಂಡರು.


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ