Breaking News

ರಮೇಶ ಸಿಡಿ ಪ್ರಕರಣದಿಂದ ಮುಕ್ತರಾಗಲೆಂದು ಅಭಿಮಾನಿಗಳಿಂದ 30 ಕಿ.ಮೀ ದೀರ್ಘ ದಂಡ ನಮಸ್ಕಾರ

Spread the love

ಗೋಕಾಕ : ಮಾಜಿ ಸಚಿವ ರಮೇಶ ಜಾರಕಿಹೊಳಿ ಶೀಘ್ರ ಸಿಡಿ ಪ್ರಕರಣದಿಂದ ಮುಕ್ತವಾಗಲೆಂದು ಪ್ರಾರ್ಥಿಸಿ  ತವಗ ಗ್ರಾಮದ ಇಬ್ಬರು ಅಭಿಮಾನಿಗಳು  ದೀರ್ಘ ದಂಡ ನಮಸ್ಕಾರ ಹಾಕಿದ್ದರು.

ತವಗ ಗ್ರಾಮದ ನಿವಾಸಿಗಳಾದ ಲಕ್ಕಪ್ಪ ಹತ್ತರಕಿ, ಶ್ರಿಕಾಂತ ದುಂಡರಗಿ ಎಂಬ ರಮೇಶ ಅಭಿಮಾನಿಗಳು  ತವಗ ಗ್ರಾಮದಿಂದ ಗೋಕಾಕ್ ವರೆಗೆ ಸುಮಾರು 30 ಕಿ.ಮೀ ದಿಡ್  ನಮಸ್ಕಾರ್ ಕೈಗೊಂಡಿದ್ದಾರೆ.

ಇದೇ ವೇಳೆ ಲಕ್ಕಪ್ಪ ಮಾತನಾಡಿ, ರಮೇಶ ಜಾರಕಿಹೊಳಿ ಅವರಿಗೊಸ್ಕರ್ ಬೆಳಗಾವಿಯಿಂದ ಬೆಂಗಳೂರು, ದೆಹಲಿ ಅವರಿಗೆ ಹೋರಾಟ ಮಾಡಲು ಸಿದ್ದರಿದ್ದೇವೆ. ಪ್ರಾಣ ಕೊಡುವುದಕ್ಕೂ ಸಹ ಸಿದ್ದ. ಈ ಪ್ರಕರಣದಿಂದ ಮುಕ್ತರಾಗಬೇಕು ಎನ್ನುವುದು ನಮ್ಮ ಆಸೆ. ಆದ ಕಾರಣ ತವಗದ ಹನುಮಂತ ದೇವಸ್ಥಾನದಿಂದ ಗೋಕಾಕ  ವರೆಗೆ ದಿಡ್ ನಮಸ್ಕಾರ ನಡೆಸುತ್ತಿದ್ದೇವೆ ಎಂದರು.

ದಿಡ್ ನಮಸ್ಕಾರ್ ಕೈಗೊಂಡ ಸಂದರ್ಭದಲ್ಲಿ ಅಭಿಮಾನಿಗಳೊಂದಿಗೆ ಗ್ರಾಮಸ್ಥರು  ರಮೇಶ್ ಅಣ್ಣಾ ಜಾರಕಿಹೊಳಿ ಅವರಿಗೆ ಜೈ, ದಿನೇಶ ಕಲ್ಲಹಳ್ಳಿಗೆ ಧಿಕ್ಕಾರ ಕೂಗಿದರು.


Spread the love

About Laxminews 24x7

Check Also

ಧರ್ಮದ ರಕ್ಷಣೆ ನಾವು ಮಾಡಿದರೆ ಮಾತ್ರ ನಮ್ಮನ್ನು ಧರ್ಮ ರಕ್ಷಣೆ ಮಾಡುತ್ತೆ ಡಾ. ಅಭಿನವ ಸ್ವಾಮೀಜಿ ಅಭಿಮತ

Spread the loveಗಡಿ ರಕ್ಷಣೆ ಮಾಡುವ ಸೈನಿಕರು ಧರ್ಮರಕ್ಷಣೆ ಮಾಡಬಹುದು ಎಂಬರಕ್ಕೆ ಉದಾಹರಣೆ ಅಂದರೆ ಸೈನಿಕರು ಕಾಗವಾಡದಲ್ಲಿ ಕಟ್ಟಿಸಿದ ವಿಠ್ಠಲ- …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ