Breaking News

ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮರುಳುಗಾರಿಕೆ.

Spread the love

ಕರೋಣದಿಂದಾಗಿ ಈ ಭಾರಿ ಜನರು ಜೀವ ಕಳೆದುಕೊಂಡು ಜೀವನ‌ ನರಕಯಾತನೆ ಅನುಭವಿಸುತ್ತಿದ್ದಾರೆ..ಮನೆ ಮಾಡಿಕೊಳ್ಳಲು ಮರಳು ಸಿಗದಂತಾ ಪರಿಸ್ಥಿತಿ ನಿರ್ಮಾಣವಾಗಿದೆ…ಆದ್ರೆ ಕೆಲವರು ಇದನ್ನೆ ಸದ್ಬಳಿಕೆ ಮಾಡಿಕೊಂಡು ಎಗ್ಗಿಲ್ಲದೆ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿದ್ದಾರೆ.ಹೌದು ಅಕ್ರಮವಾಗಿ ಕೃತಕ ಮರಳು ತಯಾರಿಕೆಗಳನ್ನು ಮಾಡಿಕೊಂಡು ಜನರ ಫಲವತ್ತಾದ ಜಮೀನುಗಳನ್ನ ನಾಶಮಾಡುತ್ತಿರುವ ದೃಶ್ಯ ಕಂಡು ಬರೋದು ಬಾಗಲಕೋಟ ಜಿಲ್ಲೆಯ ಜಮಖಂಡಿ ಹಾಗೂ ರಬಕವಿ ಬನಹಟ್ಟಿ ತಾಲೂಕಿನಾದ್ಯತ ನಡೆದಿದೆ.ಬನಹಟ್ಟಿ ತಾಲೂಕಿನ‌ ಬಂಡಿಗಣ್ಣಿ ಕ್ರಾಸ್ ಹತ್ತಿರ ಪ್ರಕಾಶ್ ಜಂಬಗಿ ಎಂಬಾತ ಹೊರವಲಯದ ಜಮೀನುಗಳಲ್ಲಿ ಅಕ್ರಮವಾಗಿ ಕೃತಕ ಮರಳು ತಯಾರಿಸಿ ೧ ಬ್ರಾಸ್ ಮರಳಿಗೆ ೬-೧೦ ಸಾವಿರ ರೂಪಾಯಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.ಅಲ್ಲದೇ ಅರಣ್ಯ ಪ್ರದೇಶಗಳಲ್ಲಿನ ಮಣ್ಣು ತಂದು ಅದನ್ನ ಕೃತಕ ಮರಳಾಗಿ ಪರಿವರ್ತಿಸಿ ಜನರಿಗೆ ಮೋಸ ಮಾಡುತ್ತಿದ್ದಾರೆ..

ಸರ್ಕಾರ ಬದಾಮಿ ತಾಲೂಕಿನಲ್ಲಿ ಮರಳು ಲೀಜ್ ಪಾಯಿಂಟಗಳಿದರು ಕೂಡ ಅವು ಸರ್ಕಾರಿ ಕಾಮಗಾರಿಗಳಿಗೆ ಅಂತ ಹೇಳು ಬಡವರ ಹಣ ದೊಚ್ಚಲು ಮುಂದಾಗಿದ್ದಾರೆ…ಇಂತಹ ಅಕ್ರಮ ಕೃತಕ ಮರಳು ಅಡ್ಡೆಗಳ ಸಂಭಂದಪಟ್ಟ ಅಧಿಕಾರಿಗಳಿಗೆ ಮಾಹಿತಿ ಇದ್ರು…ಅವರ ಕೊಡುವ ಬಿಡಿಗಾಸಿಗಾಗಿ ಕಂಡು‌ಕಾಣದಂತೆ ಅಧಿಕಾರಿಗಳು ಕುರುಡು ಜಾನತನ ಪ್ರದರ್ಶನ ನಡೆಸಿದ್ದಾರೆ..ಇನಾದ್ರೂ ಅಧಿಕಾರಿಗಳು ಎಚ್ಚೆತುಕೊಂಡು ಇಂತಹ ಅಡ್ಡೆಗಳಿಗೆ ಕಡಿವಾಣ ಹಾಕಿ. ಲೀಜ್ ಪಾಯಿಂಟಗಳ ಮೂಲಕ ಜನಸಾಮಾನ್ಯರಿಗೆ ಮರಳು ಒದಗಿಸಲು ಮುಂದಾಗಬೇಕಿದೆ.

ವರದಿ :- ಶ್ಯಾಮ್ ತಳವಾರ ಬಾಗಲಕೋಟೆ


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ