Breaking News

ಪ್ರಧಾನಿ ಮೋದಿ ಗಡ್ಡ ಬಿಟ್ಟಿರುವುದಕ್ಕೂ ರಾಮ ಮಂದಿರ ನಿರ್ಮಾಣಕ್ಕೂ ಸಂಬಂಧವಿದೆಯೇ……….?

Spread the love

ಬಾಗಲಕೋಟೆ: ಪ್ರಧಾನಿ ಮೋದಿ ಗಡ್ಡ ಬಿಟ್ಟಿರುವುದಕ್ಕೂ ರಾಮ ಮಂದಿರ ನಿರ್ಮಾಣಕ್ಕೂ ಸಂಬಂಧವಿದೆಯೇ ಎಂಬ ಹೊಸ ಚರ್ಚೆ ಆರಂಭವಾಗಿದ್ದು, ಇದೀಗ ಪೇಜಾವರ ವಿಶ್ವಪ್ರಸನ್ನ ತೀರ್ಥ ಶ್ರೀಗಳು ನೀಡಿರುವ ಹೇಳಿಕೆ ಈ ಚರ್ಚೆಗೆ ಇನ್ನಷ್ಟು ಪುಷ್ಠಿ ನೀಡುವಂತಿದೆ.

ಬಾಗಲಕೋಟೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾಣಿಕೆ ಸಂಗ್ರಹಕ್ಕೆ ಚಾಲನೆ ನೀಡಿದ ಸ್ವಾಮೀಜಿ, ನಮ್ಮಲ್ಲಿ ದೇವಸ್ಥಾನದ ಕಾರ್ಯ ನಡೆಯುವಾಗ ದೀಕ್ಷಾ ಬದ್ಧರಾಗುವುದಿದೆ. ಅದೇ ರೀತಿ ಪ್ರಧಾನಿ ಮೋದಿ ಅವರು ರಾಮ ಮಂದಿರ ನಿರ್ಮಾಣ ಕಾರ್ಯಕ್ಕಾಗಿ ದೀಕ್ಷೆ ತೊಟ್ಟಿದ್ದಾರೆ ಹಾಗಾಗಿ ಗಡ್ಡ ಬಿಟ್ಟಿರಬಹುದು.

ಮೋದಿಯವರು ರಾಮ ಮಂದಿರಕ್ಕೆ ಶಿಲನ್ಯಾಸ ನೆರವೇರಿಸಿದ್ದಾರೆ. ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತಿರುವುದರಿಂದ ಸಹಜವಾಗಿ ನಮ್ಮಲ್ಲಿ ಕೇಶಾದಿಗಳನ್ನು ತೆಗೆಯೋದಿಲ್ಲ. ಮಂದಿರ ಆಗುವವರೆಗೂ ಗಡ್ಡ, ತಲೆ ಕೂದಲು ಬಿಟ್ಟಿರುತ್ತೇವೆ. ಬಹುಶ: ಮೋದಿ ಅವರು ಕೂಡ ಅದನ್ನೇ ಪಾಲಿಸುತ್ತಿರಬಹುದು ಎಂದಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ