Breaking News

ನಾಗೇಶ್​ ಅಬಕಾರಿ ಸಚಿವರಾದ ನಂತರ ಎಲ್ಲಾ ವಿಭಾಗದಲ್ಲೂ ಲಂಚ ಅಧಿಕವಾಗಿದೆ,

Spread the love

ಕೋಲಾರ; ಬಾರ್ ಗಳ ಲೈಸೆನ್ಸ್ ನವೀಕರಣ ವಿಚಾರದಲ್ಲಿ ಮುಳಬಾಗಿಲು ತಾಲೂಕಿನಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಮುಳಬಾಗಿಲು ಶಾಸಕರಾಗಿರೋ ಸಚಿವ ಹೆಚ್​. ನಾಗೇಶ್ ಅವರ ಭ್ರಷ್ಟಾಚಾರ ಸಾರ್ವಜನಿಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಹೆಚ್​. ನಾಗೇಶ್​ ಸಚಿವರಾದ ನಂತರ ಎಲ್ಲಾ ವಿಭಾಗದಲ್ಲೂ ಲಂಚ ಅಧಿಕವಾಗಿದೆ, ಕಮಿಷನ್ ಕಾಮನ್ ಆಗಿದೆ ಎಂದು ಮಾಜಿ ಶಾಸಕ ಕೊತ್ತೂರು ಮಂಜುನಾಥ್​ ಕಿಡಿಕಾರಿದ್ದಾರೆ. ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ರಂಗೇರಿದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಬೆಂಬಲಿತ 45 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮುಳಬಾಗಿಲು ಪಟ್ಟಣದಲ್ಲಿ ಬೆಂಬಲಗರ ಜೊತೆಗೂಡಿ, ಅವಿರೋಧವಾಗಿ ಆಯ್ಕೆಯಾದ ಎಲ್ಲಾ ಸದಸ್ಯರನ್ನ ಅಭಿನಂದಿಸಿ ಮಾತನಾಡಿರುವ ಕೊತ್ತೂರು ಮಂಜುನಾಥ್​,

“ತಾಲೂಕಿನಲ್ಲಿ ಎಲ್ಲಾ ಪಂಚಾಯಿತಿಯಲ್ಲಿ ನಾನು ಶಾಸಕನಾಗಿದ್ದಾಗ ಏನಾದರು ಒಂದು ಅಭಿವೃದ್ದಿ ಕೆಲಸ ಮಾಡಿರುವೆ. ಇಲ್ಲವಾದರೆ ನನ್ನ ಸ್ವಂತ ನೆರವು ನೀಡಿ ಜನರ ಸಂಕಷ್ಟಕ್ಕೆ ಸ್ಪಂಧಿಸಿರುವೆ. ಹೀಗಾಗಿ ನಾನು ಜನರ ಬಳಿ ಮತ ಕೇಳಲು ಹೊರಟಿದ್ದೇನೆ. ಮುಂದೆಯೂ ಇದೇ ಕ್ಷೇತ್ರದಲ್ಲಿ ಇರುವೆ. ನನಗೆ ಕ್ಷೇತ್ರದ ಜನತೆಯೆ ದೇವರುಗಳು, ನಂತರ ನಮ್ಮ ನಾಯಕರು ಕ್ಷೇತ್ರವನ್ನ ಬಿಡುವ ಮಾತೇ ಇಲ್ಲ” ಎಂದು ತಿಳಿಸಿದ್ದಾರೆ.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ