Breaking News

ಡಿಸೆಂಬರ್ 21ರಂದು ರಾಮಾಚಾರಿ ಅಭಿಮಾನಿಗಳಿಗೆ ರಾಕಿಂಗ್ ನ್ಯೂಸ್ ಕೊಡಲು ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ.

Spread the love

ಬೆಂಗಳೂರು: ಇದೇ ಡಿಸೆಂಬರ್ 21ರಂದು ರಾಮಾಚಾರಿ ಅಭಿಮಾನಿಗಳಿಗೆ ರಾಕಿಂಗ್ ನ್ಯೂಸ್ ಕೊಡಲು ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ಧರಿಸಿದ್ದಾರೆ. ಯೆಸ್ ಈ ಕುರಿತು ಪೋಸ್ಸ್ ಮಾಡಿರುವ ಪ್ರಶಾಂತ್ ನೀಲ್ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕಾಗಿ ಕಾಯ್ತಿರಿ ಎಂದು ಹೇಳಿದ್ದಾರೆ.

ಕೆಜಿಎಫ್ ಚಾಪ್ಟರ್ -1 ತೆರೆ ಕಂಡು ಡಿಸೆಂಬರ್ 21ಕ್ಕೆ ಮೂರು ವರ್ಷವಾಗಲಿದೆ. ಅಂದುಕೊಂಡಂತೆ ಆಗಿದ್ರೆ ಕೆಜಿಎಫ್ ಇಡೀ ದೇಶದಾದ್ಯಂತ ಅಬ್ಬರಿಸುತ್ತಿತ್ತು. ಕೊರೊನಾದಿಂದ ಶೂಟಿಂಗ್ ಸ್ಥಗಿತಗೊಂಡ ಹಿನ್ನೆಲೆ ಸಿನಿಮಾ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಾ ಬಂದಿತ್ತು. ಇನ್ನು ಅಭಿಮಾನಿಗಳು ಸಿನಿಮಾ ಟೀಸರ್ ಬಿಡುಗಡೆ ಮಾಡಿ ಅಂತಾ ಟ್ವಿಟ್ಟರ್ ನಲ್ಲಿ ಒತ್ತಾಯಿಸಿದ್ದರು. ಇದೀಗ ಡಿಸೆಂಬರ್ 21, 2020, ಬೆಳಗ್ಗೆ 10.08 ನಿಮಿಷಕ್ಕೆ ಚಿತ್ರತಂಡದಿಂದ ಮಹತ್ವದ ಘೋಷಣೆಯೊಂದು ಹೊರ ಬೀಳಲಿದೆ.

ಕೆಲ ದಿನಗಳ ಹಿಂದೆ ಅಧೀರ ಮತ್ತು ರಾಕಿಯ ಕ್ಲೈಮ್ಯಾಕ್ಸ್ ದೃಶ್ಯದ ಚಿತ್ರೀಕರಣ ನಡೆಯುತ್ತಿರುವ ಬಗ್ಗೆ ಪ್ರಶಾಂತ್ ನೀಲ್ ಮಾಹಿತಿ ನೀಡಿದ್ದರು. ಇತ್ತೀಚೆಗೆ ಗುಣಮುಖರಾಗಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದ ಸಂಜಯ್ ದತ್ ಡೂಪ್ ಸಹ ಬಳಸದೇ ಸಾಹಸ ದೃಶ್ಯಗಳಲ್ಲಿ ನಟಿಸಿದ್ದಾರೆ ಎಂದು ವರದಿ ಆಗಿತ್ತು.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ