Breaking News

ಏರ್‌ಟೆಲ್, ವಿಐ ಸಾರ್ವಜನಿಕರನ್ನು ಪ್ರಚೋದಿಸುತ್ತಿದ್ದಾರೆ ಎಂದು ರಿಲಾಯನ್ಸ್​ ಟ್ರಾಯ್​ಗೆ ನೀಡಿರುವ ದೂರಿನಲ್ಲಿ ತಿಳಿಸಿದೆ.

Spread the love

ಕೃಷಿ ಸುಧಾರಣೆ ಕಾನೂನಿನ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಜಿಯೋ ಕಂಪನಿ ವಿರುದ್ಧ ಏರ್​ಟೆಲ್ ಮತ್ತು ವೋಡಾಫೋನ್ ಐಡಿಯಾ ಸುಳ್ಳು ಗಾಳಿಸುದ್ದಿ ಹಬ್ಬಿಸುತ್ತಿದೆ ಎಂದು ರಿಲಾಯನ್ಸ್ ಜಿಯೋ ಇನ್ಫೋಕಾಮ್ (ಆರ್​ಜಿಯೋ) ಆರೋಪಿಸಿದೆ.

ಹೊಸದಾಗಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಸುಧಾರಣೆ ಕಾನೂನಿನಿಂದ ರಿಲಾಯನ್ಸ್  ಲಾಭ ಮಾಡಿಕೊಳ್ಳಲು ಮುಂದಾಗಿದೆ ಎಂದು ಈ ಎರಡು ಸಂಸ್ಥೆಗಳು ಸುಳ್ಳು ಸುದ್ದಿ ಹಬ್ಬಿಸುತ್ತಿವೆ. ಈ ಎರಡು ಕಂಪನಿಗಳ ವಿರುದ್ಧ ಭಾರತೀಯ ಟೆಲಿಕಾಂ ರೆಗ್ಯುಲೆಟರ್ ಆಥಾರಿಟಿ (ಟ್ರಾಯ್) ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ರಿಲಾಯನ್ಸ್ ಆಗ್ರಹಿಸಿದೆ. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಸುಧಾರಣೆ ಕಾನೂನು ವಿರುದ್ಧ ದೇಶವ್ಯಾಪಿ ಪ್ರತಿಭಟನೆ ಭುಗಿಲೆದ್ದಿದೆ.ಕೃಷಿ ಮಸೂದೆಗಳಲ್ಲಿ ರಿಲಯನ್ಸ್ ಲಾಭ ಪಡೆದುಕೊಳ್ಳುತ್ತಿದೆ ಎಂಬ ಸುಳ್ಳು ಮತ್ತು ಕ್ಷುಲ್ಲಕ ವದಂತಿಗಳನ್ನು ಬೆಂಬಲಿಸುವಲ್ಲಿ ಮತ್ತು ಹೆಚ್ಚಿಸುವಲ್ಲಿ ನೇರವಾಗಿ / ಪರೋಕ್ಷವಾಗಿ ಈ ಎರಡು ಕಂಪನಿಗಳು ತೊಡಗಿಕೊಂಡಿದೆ ಎಂದು ರಿಲಾಯನ್ಸ್ ಆರೋಪಿಸಿದೆ.


Spread the love

About Laxminews 24x7

Check Also

ಹಸಿದ ಹೊಟ್ಟೆಗೆ ಆಸರೆ: ಮುನವಳ್ಳಿಯಲ್ಲಿ ಇಂದಿರಾ ಕ್ಯಾಂಟಿನ್ ಲೋಕಾರ್ಪಣೆ!

Spread the love​”ಬಡವರ ಮತ್ತು ಶ್ರಮಿಕ ವರ್ಗದ ಜನರ ಹಸಿವು ನೀಗಿಸುವ ಉದ್ದೇಶದಿಂದ, ಇಂದು ಮುನವಳ್ಳಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಲಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ