Breaking News

ಬೆಳಗಾವಿಯಲ್ಲಿ ಪೊಲೀಸ್ ಭದ್ರತೆಯಲ್ಲಿ ಬಸ್ ಸಂಚಾರ ಆರಂಭ

Spread the love

ಬೆಳಗಾವಿಯಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಬಸ್ ಸಂಚಾರ ಆರಂಭಗೊಂಡಿದೆ. ಬೆಳಗಾವಿಯಿಂದ ರಾಮದುರ್ಗಕ್ಕೆ ಮೊದಲ ಬಸ್ ತೆರಳಿದೆ.

ಸಂಚರಿಸುತ್ತಿರುವ ಬಸ್‌ನಲ್ಲಿ ಇಬ್ಬರು ಪೇದೆಗಳ ನಿಯೋಜನೆ ಮಾಡಲಾಗಿದೆ. ಆಯಾ ಠಾಣಾ ವ್ಯಾಪ್ತಿ ಪೊಲೀಸರಿಂದ ಸರ್ಕಾರಿ ಬಸ್‌ಗೆ ಎಸ್ಕಾರ್ಟ್ ಭದ್ರತೆ ಒದಗಿಸಲಾಗಿದೆ. ಬಳಿಕ ಆಯಾ ಠಾಣಾ ವ್ಯಾಪ್ತಿಯ ಪೊಲೀಸರಿಂದ ಬಸ್‌ಗಳಿಗೆ ಭದ್ರತೆ ನೀಡಲಾಗುತ್ತದೆ.

ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಆಗಮಿಸಿ, ಕರ್ತವ್ಯಕ್ಕೆ ಹಾಜರಾಗಿ ಬಸ್ ಆರಂಭಿಸುವಂತೆ ಸಾರಿಗೆ ಸಿಬ್ಬಂದಿಗೆ ಮನವಿ ಮಾಡಿದರು. ಪ್ರಯಾಣಿಕರು ತೆರಳುವ ಬಸ್‌ಗಳಿಗೆ ಭದ್ರತೆ ಒದಗಿಸಲಾಗುವುದು. ಪ್ರಯಾಣಿಕರು ಯಾವುದೇ ಆತಂಕಕ್ಕೊಳಗಾಗದೇ ಪ್ರಯಾಣ ಮಾಡಬಹುದು ಎಂದು ಮಾಧ್ಯಮಗಳಿಗೆ ಡಿಸಿ ಎಂ.ಜಿ.ಹಿರೇಮಠ ತಿಳಿಸಿದರು.

ಸಂಚಾರ ಆರಂಭಿಸುವ ಬಸ್‌ಗಳಿಗೆ ಸಕಲ ಭದ್ರತೆ ನೀಡಿದ್ದೇವೆ. ಮುಂದೆ ಆಯಾ ಠಾಣಾ ವ್ಯಾಪ್ತಿಯ ಪೊಲೀಸರು ಬಸ್‌ಗೆ ಭದ್ರತೆ ನೀಡುತ್ತಾರೆ ಎಂದು ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಇದೇ ಕಾಲಕ್ಕೆ ತಿಳಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ್ ನಿಂಬರ್ಗಿ ಕೂಡ ಹಾಜರಿದ್ದರು
ಜಮೆಯಾಗುತ್ತಿರುವ ಹೋರಾಟಗಾರರು:
ಪ್ರತಿಭಟನಾ ನಿತರ ಸಾರಿಗೆ ಸಿಬ್ಬಂದಿ ಮತ್ತು ರೈತ ಮುಖಂಡರು ಆಗಮಿಸುತ್ತಿದ್ದಾರೆ. ಹೋರಾಟಗಾರರು ಬೆಳಗಾವಿಯ ಅತಿಥಿ ಗೃಹದಲ್ಲಿ ಜಮಾವಣೆಗೊಳ್ಳುತ್ತಿದ್ದಾರೆ.

ಪೊಲೀಸರು ಹೋರಾಟಗಾರರನ್ನು ವಾಪಸ್ ಹೋಗಿ ಎಂದು ತಿಳಿಸಿದ್ದಾರೆ. ಸರ್ಕಾರದ ಆದೇಶ ಇದೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ: ಇಂದಿನಿಂದ ಕೆಎಸ್‌ಎನ್ ಗೀತೆಗಳ ಗಾಯನ ತರಬೇತಿ

Spread the love‌ಬೆಳಗಾವಿ: ‘ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ‘ಕೆ.ಎಸ್‌.ನರಸಿಂಹಸ್ವಾಮಿ ನೆನಪಿನ ವಸಂತೋತ್ಸವ’ ‍ಪ್ರಯುಕ್ತ, ಮಾರ್ಚ್‌ 10, 11ರಂದು ಕೆ.ಎಸ್.ನರಸಿಂಹಸ್ವಾಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ