Breaking News

ಮದ್ವೆಗೆ ಮೂರು ದಿನ ಮುನ್ನ ಯುವಕನ ಮರ್ಮಾಂಗ ಕತ್ತರಿಸಿದ ಗೆಳೆಯರು!

Spread the love

ಲಕ್ನೋ: ಮದುವೆಗೆ ಮೂರು ದಿನವಿರುವಾಗಲೇ ಯುವಕನ ಮರ್ಮಾಂಗ ಕತ್ತರಿಸಿರುವ ಭಯಾನಕ ಘಟನೆ ಉತ್ತರ ಪ್ರದೇಶದ ಕೊಟ್ಟಾಲಿ ನಗರದ ಇದಗ್ ಪ್ರದೇಶದಲ್ಲಿ ನಡೆದಿದೆ.ಸಮೀರ್ ಹಲ್ಲೆಗೊಳಗಾದ ಯುವಕ. ಸಮೀರ್ ಮದುವೆಗೆ ಮೂರು ದಿನಗಳ ಬಾಕಿ ಇತ್ತು. ಫರ್ವೇಜ್ ಎಂಬಾತನ ಬಳಿ ಸಮೀರ್ ಒಂದು ಲಕ್ಷ ರೂ. ಸಾಲ ಪಡೆದುಕೊಂಡಿದ್ದನು. ಅದೇ ವಿಚಾರವಾಗಿ ಇಬ್ಬರ ಮಧ್ಯೆ ಹಲವು ಬಾರಿ ಜಗಳ ನಡೆದಿತ್ತು. ಹಣಕಾಸಿನ ಸಂಬಂಧ ಸಮೀರ್ ಮತ್ತು ಫರ್ವೇಜ್ ನಡುವೆ ದ್ವೇಷದ ಜ್ವಾಲೆ ಹೊತ್ತಿಕೊಂಡಿತ್ತು.

ಹಣ ಕೊಡದ ಹಿನ್ನೆಲೆ ಕೋಪಗೊಂಡಿದ್ದ ಸಮೀರ್ ತನ್ನಿಬ್ಬರು ಗೆಳೆಯರನ್ನ ಸಮೀರ್ ಬಳಿ ಕಳುಹಿಸಿದ್ದಾರೆ. ಇಬ್ಬರು ಉಪಾಯವಾಗಿ ಸಮೀರ್ ನನ್ನು ಗ್ರಾಮದ ಹೊರವಲಯದಲ್ಲಿರುವ ಅರಣ್ಯ ಪ್ರದೇಶಕ್ಕೆ ಕರೆ ತಂದಿದ್ದಾರೆ. ಈ ವೇಳೆ ಮೂವರು ಸಮೀರ್ ಮರ್ಮಾಂಗ ಕತ್ತರಿಸಿ ಎಸ್ಕೇಪ್ ಆಗಿದ್ದಾರೆ.

 

ರಕ್ತದ ಮಡುವಿನಲ್ಲಿ ಬಿದ್ದಿದ್ದ ಸಮೀರ್ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಸಮೀರ್ ಧ್ವನಿ ಕೇಳಿದ್ದ ದಾರಿಹೋಕರು ಆತನನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಮೀರ್ ಸ್ಥಿತಿ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.


Spread the love

About Laxminews 24x7

Check Also

ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

Spread the loveಹೊಸದಿಲ್ಲಿ: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಏರುಪೇರಾಗಿದ್ದು, ದೆಹಲಿಯ ಸರ್ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಲಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ