Breaking News

ನಟಿ ಕಂಗನಾ ರಣಾವತ್ ಅವರುಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿ

Spread the love

ಹೈದರಾಬಾದ್: ಸದ್ಯ ಸುದ್ದಿಯಲ್ಲಿರುವ  ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಕೆಜಿಎಫ್ ಅಧೀರ ಸಂಜಯ್ ದತ್ ಅವರನ್ನು ಭೇಟಿಯಾಗಿದ್ದಾರೆ.ಹೌದು. ಇಂದು ಬೆಳಗ್ಗೆ ಭೇಟಿಯಾಗಿರುವ ಕಂಗನಾ ಸಂಜಯ್ ದತ್ ಅವರನ್ನು ನೋಡಿ ಅಚ್ಚರಿಯೊಂದಿಗೆ ಖುಷಿಯಾಗಿದ್ದಾರೆ. ಅಲ್ಲದೆ ಅವರ ಆರೋಗ್ಯ ಇನ್ನಷ್ಟು ವೃದ್ಧಿಸಲು ಪ್ರಾರ್ಥೊಸೋಣ ಎಂದು ತಿಳಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಂಗನಾ, ಹೈದರಾಬಾದ್‍ನ ಹೋಟೆಲಿನಲ್ಲಿ ತಂಗಿರುವ ಸುದ್ದಿ ತಿಳಿದು ನಾನು ಇಂದು ಬೆಳಗ್ಗೆ ಸಂಜು ಅವರನ್ನು ನೋಡಲು ತೆರಳಿದೆ. ಈ ವೇಳೆ ಅವರ ಆರೋಗ್ಯವನ್ನು ವಿಚಾರಿಸಿದೆ. ಅವರು ಇನ್ನಷ್ಟು ಸುಂದರ ಹಾಗೂ ಆರೋಗ್ಯವಂತರಾಗಿರುವುದನ್ನು ಕಂಡು ನಿಜಕ್ಕೂ ನನಗೆ ಅಚ್ಚರಿಯಾಯಿತು. ನಾವೆಲ್ಲರೂ ಅವರ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸೋಣ ಎಂದು ಬರೆದುಕೊಂಡಿದ್ದಾರೆ.

ಆಗಸ್ಟ್ 8ರಂದು ಎದೆನೋವು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡು ನಟ ಸಂಜಯ್ ಅವರು ಲೀಲಾವತಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಇವರ ಕೊರೊನಾ ಪರೀಕ್ಷೆ ನಡೆಸಿದ್ದು, ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಕೊರೊನಾ ಅಲ್ಲದ ಕಾರಣ ಅವರಿಗೆ ನಾನ್ ಕೋವಿಡ್ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಆ ನಂತರ ನಟಶ್ವಾಸಕೋಶದ ಕ್ಯಾನ್ಸರ್ ನಿಂದ ಬಳಲುತ್ತಿರುವ ವಿಚಾರ ಬಹಿರಂಗವಾಗಿತ್ತು. ಈ ಸಂಬಂಧ ಟ್ವೀಟ್ ಮಾಡಿದ್ದ ಅಧೀರ, ಸಿನಿಮಾದಿಂದ ಸಣ್ಣ ಬ್ರೇಕ್ ಪಡೆದುಕೊಳ್ಳುವುದಾಗಿ ತಿಳಿಸಿದ್ದರು. ನನಗೆ ಚಿಕಿತ್ಸೆ ಮಾಡಿಸಿಕೊಳ್ಳಬೇಕಿದ್ದು, ಸ್ನೇಹಿತರು ಕುಟುಂಬಸ್ಥರು ನನ್ನ ಜೊತೆಗಿದ್ದಾರೆ. ಹೀಗಾಗಿ ನನ್ನ ಆತ್ಮೀಯರು ಏನೂ ಯೋಚನೆ ಮಾಡಬೇಡಿ. ಅಲ್ಲದೆ ವದಂತಿಗಳನ್ನು ಕೂಡ ನಂಬಬೇಡಿ. ನಿಮ್ಮೆಲ್ಲರ ಹಾರೈಕೆಯಿಂದ ನಾನು ಅತೀ ಶೀಘ್ರವೇ ಹುಷಾರಾಗಿ ನಿಮ್ಮ ಮುಂದೆ ಬರುತ್ತೇನೆ ಎಂದು ಬರೆದುಕೊಂಡಿದ್ದರು.


Spread the love

About Laxminews 24x7

Check Also

ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಹಿರಿಯ ನಟ ಉಮೇಶ್ ಅಸ್ವಸ್ಥ, ಆಸ್ಪತ್ರೆಗೆ ದಾಖಲು

Spread the loveಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಎಂ.ಎಸ್‌.ಉಮೇಶ್‌ ಅವರು ಮನೆಯ ಸ್ನಾನದ ಕೋಣೆಯಲ್ಲಿ ಕಾಲು ಜಾರಿ ಬಿದ್ದು ಗಾಯಗೊಂಡಿದ್ದು, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ