ರಾಯಚೂರು: ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಯುವಕರೊಂದಿಗೆ ಕಬಡ್ಡಿ ಆಡಿದ್ದಾರೆ.
ರಾಯಚೂರಿನ ಮಸ್ಕಿ ಉಪಚುನಾವಣೆ ಅಖಾಡ ಸಿದ್ಧವಾಗುತ್ತಿದೆ. ಒಂದೆಡೆ ರಾಜಕಾರಣಿಗಳು ಚುನಾವಣಾ ಕಬಡ್ಡಿಗೆ ಸಿದ್ಧವಾಗುತ್ತಿದ್ದಾರೆ. ಇನ್ನೊಂದೆಡೆ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ನೇರವಾಗಿ ಕಬಡ್ಡಿ ಮೈದಾನದಲ್ಲಿ ಆಟವಾಡಿ ಕ್ರೀಡೋತ್ಸಾಹ ತೋರಿದ್ದಾರೆ.ಮಸ್ಕಿ ತಾಲೂಕಿನ ಬಳಗಾನೂರಿನಲ್ಲಿ ದೈಹಿಕ ಶಿಕ್ಷಕ ಮಹಾದೇವಪ್ಪ ಸ್ಮರಣಾರ್ಥ ಆಯೋಜಿಸಿದ್ದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಉದ್ಘಾಟನಾ ಸಮಾರಂಭದಲ್ಲಿ ಪ್ರತಾಪಗೌಡ ಪಾಟೀಲ್ ಭಾಗಿಯಾಗಿದ್ದರು. ಚುನಾವಣಾ ಪ್ರಚಾರದ ಮಧ್ಯೆ ಪ್ರತಾಪ್ ಗೌಡ ಪಾಟೀಲ್ ಪಂದ್ಯಾವಳಿ ಉದ್ಘಾಟನೆಯ ಭಾಗವಾಗಿ ಯುವಕರೊಂದಿಗೆ ಕಬಡ್ಡಿ ಆಡಿದರು.
Laxmi News 24×7