Breaking News

ಕನ್ನಡಿಗರನ್ನು ಕೆಣಕುವ ಚಾಳಿಮಹಾರಾಷ್ಟ್ರದ ರಾಜಕಾರಣಿಗಳು ಮುಂದುವರಿಸಿದ್ದಾರೆ.

Spread the love

ಬೆಳಗಾವಿ: ಪದೇ, ಪದೇ ಬೆಳಗಾವಿ ಗಡಿ ವಿವಾದದ ಕ್ಯಾತೆ ತೆಗೆದು ಜನರ ಮಧ್ಯೆ ಭಾಷಾ ವೈಷ್ಯಮದ ಬೀಜ ಬಿತ್ತಿ ಕನ್ನಡಿಗರನ್ನು ಕೆಣಕುವ ಚಾಳಿಯನ್ನು ಮಹಾರಾಷ್ಟ್ರದ ರಾಜಕಾರಣಿಗಳು ಮುಂದುವರಿಸಿದ್ದಾರೆ.

ಬೆಳಗಾವಿ, ನಿಪ್ಪಾಣಿ ಬೀದರ್, ಬಾಲ್ಕೀ, ಮಹಾರಾಷ್ಟ್ರಕ್ಕೆ ಸೇರಿಸುವುದು ಬಾಳಾಸಾಹೇಬ್ ಠಾಖ್ರೆ ಅವರ ಕನಸಾಗಿತ್ತು, ಮಹಾರಾಷ್ಟ್ರ ಸರ್ಕಾರ ಬಾಳಾಸಾಹೇಬ್ ಅವರ ಕನಸನ್ನು ನನಸು ಮಾಡುತ್ತದೆ ಎಂದು ಡಿಸಿಎಂ, ಎನ್‍ಸಿಪಿ ಅಜೀತ್ ಪವಾರ್ ಹೇಳಿಕೆ ನೀಡುವ ಮೂಲಕ ನಿನ್ನೆ ಮತ್ತೆ ಗಡಿ ಕ್ಯಾತೆ ತೆಗೆದಿದ್ದಾರೆ.

ನಿನ್ನೆ ಮುಂಬಯಿಯಲ್ಲಿ ನಡೆದ ಶಿವಸೇನೆಯ ಸಂಸ್ಥಾಪಕ ದಿವಂಗತ ಬಾಳಾಸಾಹೇಬ ಠಾಖ್ರೆ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಮಹಾರಾಷ್ಟ್ರ ಸರ್ಕಾರ ಬೆಳಗಾವಿ ಮರಾಠಿ ಭಾಷಿಕರ ಪರವಾಗಿದೆ. ಬಾಳಾಸಾಹೇಬ್ ಠಾಖ್ರೆ ಅವರ ಕನಸಿನಂತೆ ಮಹಾರಾಷ್ಟ್ರ ಸರ್ಕಾರ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಲಿದೆ ಎಂದು ಗಡಿ ಕ್ಯಾತೆ ತೆಗೆದಿದ್ದಾರೆ.

ಗಡಿ ವಿವಾದ ಸುಪ್ರೀಂ ಕೋರ್ಟಿನಲ್ಲಿದ್ದರೂ ಸಹ ಮಹಾರಾಷ್ಟ್ರ ಸರ್ಕಾರ ಪದೇ, ಪದೇ ಗಡಿ ಕ್ಯಾತೆ ತೆಗೆದು ಭಾರತದ ಒಕ್ಕೂಟ ವ್ಯೆವಸ್ಥೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ.


Spread the love

About Laxminews 24x7

Check Also

ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು

Spread the love ಬೆಳಗಾವಿ: ಡಾ.ಬೆಟಗೇರಿ ಕೃಷ್ಣ್ಣಶರ್ಮರು ಮಾತೃ ಹೃದಯದ ಆಶ್ರಯದಲ್ಲಿ ಬೆಳೆದವರು. ಹೀಗಾಗಿ, ಅವರ ಕೃತಿಗಳಲ್ಲಿ ಸ್ತ್ರೀತ್ವದ ಅಂಶಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ