Breaking News

ಕೊರೊನಾ ಸಂಕಷ್ಟ ಸಮಯದಲ್ಲಿ ಅಕ್ಕಿ-ಆಹಾರ ಕಿಟ್​ ನೀಡಿರುವುದು ದೊಡ್ಡತನ.ನಟ ದರ್ಶನ್​ ಹೇಳಿದರು.

Spread the love

ಬೆಂಗಳೂರು: ಕೊರೊನಾ ಸಂಕಷ್ಟ ಸಮಯದಲ್ಲಿ ಅಕ್ಕಿ-ಆಹಾರ ಕಿಟ್​ ನೀಡಿರುವುದು ದೊಡ್ಡತನ. ಮುನಿರತ್ನರ ಆ ದೊಡ್ಡತನದಿಂದಲೇ ನಾನು ಪ್ರಚಾರಕ್ಕೆ ಬಂದಿದ್ದೇನೆ ಎಂದು ನಟ ದರ್ಶನ್​ ಹೇಳಿದರು. ಮಾನವೀಯ ದೃಷ್ಟಿಯಿಂದಷ್ಟೇ ಪ್ರಚಾರಕ್ಕೆ ಹೋಗುತ್ತಿದ್ದೇನೆ. ನಾನು ಯಾವುದೇ ಪಕ್ಷ ನೋಡಿ ಪ್ರಚಾರಕ್ಕೆ ಹೋಗುತ್ತಿಲ್ಲ. ವ್ಯಕ್ತಿ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದು ದರ್ಶನ್ ಹೇಳಿದರು.

ಕೊರೊನಾ ಟೈಮಲ್ಲಿ ಮುನಿರತ್ನ ಅನ್ನ ದಾಸೋಹ ನಡೆಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಅವರ ಸೇವೆಯನ್ನ ನೋಡೋಣ. ಮಾನವೀಯತೆ ನೋಡಿ ಮುನಿರತ್ನ ಪರ ಪ್ರಚಾರಕ್ಕೆ ಹೋಗ್ತಿದ್ದೀನಿ. ವ್ಯಕ್ತಿ ನೋಡಿ ಅಷ್ಟೇ ಪ್ರಚಾರಕ್ಕೆ ಹೋಗ್ತಿದ್ದೇನೆ ಎಂದ ದರ್ಶನ್ ಜೊತೆಗೆ ನಿಖಿಲ್ ಅವರು ಅವರ ಅಭ್ಯರ್ಥಿ ಪರ ಪ್ರಚಾರ ಮಾಡ್ತಿದ್ದಾರೆ ಎಂದು ಹೇಳಿ ತರೆಳಿದರು.

ನವೆಂಬರ್​ 3ರಂದು ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯ ಹಿನ್ನೆಲೆಯಲ್ಲಿ ಮುನಿರತ್ನ ಪರ ನಟ ದರ್ಶನ್ ಪ್ರಚಾರಕ್ಕೆ ತೆರಳಿದರು.


Spread the love

About Laxminews 24x7

Check Also

ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ

Spread the love ಸಂಬಂಧಿಕರ‌ ಹುಡಗನ ಪ್ರೀತಿಸಿದ್ದಕ್ಕೆ ಹೆತ್ತ ಮಗಳನ್ನೇ ಕೊಂದ ತಂದೆ ತುಮಕೂರು : ಪ್ರೀತಿ ಬಲೆಗೆ ಬಿದ್ದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ