Breaking News

ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ:ತಂದೆ ಸುಂದರ್ ರಾಜ್

Spread the love

ಬೆಂಗಳೂರು: ನಟಿ ಮೇಘನಾ ರಾಜ್ ಸರ್ಜಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮೂರು ತಿಂಗಳ ನಂತರ ಅದ್ಧೂರಿಯಾಗಿ ನಾಮಕರಣ ಮಾಡಲಾಗುವುದು ಎಂದು ಮೇಘನಾ ತಂದೆ ಸುಂದರ್ ರಾಜ್ ಹೇಳಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಸುಂದರ್ ರಾಜ್, ತಿರುಪತಿ ತಿಮ್ಮಪ್ಪನ ಹರಕೆಯಿಂದ ನನ್ನ ಮೊಮ್ಮಗ ಹುಟ್ಟಿದ್ದಾನೆ. ಕನ್ನಡದ ನೆಲದಲ್ಲಿ ದಸರಾ ಹಬ್ಬದ ವೇಳೆ ಮೊಮ್ಮಗು ಹುಟ್ಟಿರೋದು ಶುಭ ಸೂಚಕ. ನವೆಂಬರ್ 1 ರಂದು ಮೇಘನಾ ರಾಜ್ ಎಲ್ಲರ ಜೊತೆ ಮಾತನಾಡುತ್ತಾರೆ. ಕೊರೊನಾ ಕಾಲದಿಂದಾಗಿ ಮೇಘನಾ ರಾಜ್ ಹೊರಗೆ ಬರುವಂತಿಲ್ಲ ಎಂದರು.

ಅರ್ಜುನ್ ಸರ್ಜಾ ಫೋನ್ ಮಾಡಿ ಮಗುವನ್ನ ಬರಮಾಡಿಕೊಳ್ಳುವದರ ಕುರಿತು ಮಾತಾನಾಡಿದ್ರು. ಅರ್ಜುನ್ ಸರ್ಜಾ ಜೆಂಟಲ್‍ಮ್ಯಾನ್, ಧೃವ ಸರ್ಜಾ ಸೂಪರ್ ಶೋ ಮ್ಯಾನ್. ಮಗು ಹುಟ್ಟಿದ ತಕ್ಷಣ ಎಲ್ಲರಿಗೂ ತೋರಿಸಿ ಸಂಭ್ರಮಿಸಿದರು. ಆದ್ರೆ ತಂದೆ ಮಗಳನ್ನು ನೋಡಿಕೊಳ್ಳುವವನು ವಾಚ್ ಮ್ಯಾನ್. ಆ ಕೆಲಸವನ್ನ ಕೊನೆಯವರೆಗೂ ನಾನು ನಿರ್ವಹಿಸುತ್ತೇನೆ. ಚಿರಂಜೀವಿ ಸರ್ಜಾ ಇಲ್ಲ ಅನ್ನೋದನ್ನ ನಂಬಲು ಆಗುತ್ತಿಲ್ಲ. ಮದುವೆಯಾದ ಎರಡೇ ವರ್ಷದಲ್ಲಿ ಚಿರಂಜೀವಿ ನಮ್ಮನ್ನ ಅಗಲಿ ಹೋದ ಎಂದು ಹೇಳುತ್ತಾ ಭಾವುಕರಾದರು. 


Spread the love

About Laxminews 24x7

Check Also

ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್ ಗೆಳತಿಯ ಹತ್ಯೆ – ವಿವಾಹಿತ ಅರೆಸ್ಟ್‌

Spread the loveಬೆಂಗಳೂರು: ವೈಯರ್‌ನಿಂದ ಕತ್ತು ಬಿಗಿದು ಲಿವ್ ಇನ್‌ ಗೆಳತಿಯನ್ನು ವಿವಾಹಿತ ಕೊಲೆ ಮಾಡಿರುವ ಘಟನೆ ಬೆಂಗಳೂರಿನ  ವರ್ತೂರಿನಲ್ಲಿ  …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ