Breaking News

ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ

Spread the love

ಮಡಿಕೇರಿ: ದೇವರಿಗೆ ವಿನಮ್ರವಾಗಿ ಕೈ ಮುಗಿದು, ಸುತ್ತು ಬಂದ ಬಳಿಕ ಮಂಗಳಾರತಿಯಲ್ಲಿದ್ದ ಹಣವನ್ನು ಖತರ್ನಾಕ್ ಭಕ್ತೆಯೊಬ್ಬಳು ಎಗರಿಸಿದ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ.

ಅಕ್ಟೋಬರ್ 12 ರಂದು ನಡೆದಿರುವ ಮಹಿಳೆಯ ಖತರ್ನಾಕ್ ಕೆಲಸ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬುಧವಾರ ಸಂಜೆ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸದ್ಯ ಈ ವೀಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವೀಡಿಯೋದಲ್ಲೇನಿದೆ?
ಮಹಿಳೆ ಮೊದಲು ದೇವರಿಗೆ ಕೈಮುಗಿದು ಅತ್ತ-ಇತ್ತ ನೋಡುತ್ತಾಳೆ. ನಂತರ ಗರ್ಭಗುಡಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿ ದುಡ್ಡು ಎಗರಿಸಿದ್ದಾಳೆ. ಕೈಮುಗಿದು ಕುಂಕುಮ ಪಡೆದು ಮತ್ತೊಮ್ಮೆ ತಟ್ಟೆಯಲ್ಲಿದ್ದ ಹಣವನ್ನು ಕದ್ದಿದ್ದಾಳೆ. ಅಲ್ಲದೆ ಹೊರಬಂದು ಪರಾರಿಯಾಗಲು ಲಿಫ್ಟ್ ಕೊಡುವಂತೆ ಬೈಕ್ ಸವಾರ ಬಳಿ ಕೇಳಿಕೊಳ್ಳುತ್ತಾಳೆ. ಅದು ಸಾಧ್ಯವಾಗದಿದ್ದಾಗ ಧಾವಂತದಿಂದ ಎಸ್ಕೇಪ್ ಆಗಿದ್ದಾಳೆ


Spread the love

About Laxminews 24x7

Check Also

ತೀರ್ಥಹಳ್ಳಿಯ ಮಹಿಷಿಯ ಉತ್ತರಾದಿ ಮಠದಲ್ಲಿ ಕಳ್ಳತನ – ಕೆಲವೇ ಗಂಟೆಯಲ್ಲಿ 1 ಕೋಟಿ ಮೌಲ್ಯದ ಚಿನ್ನದ 16 ಹಲಗಾರತಿ ವಶಕ್ಕೆ

Spread the loveಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮಹಿಷಿಯ ಉತ್ತರಾದಿ ಮಠದಲ್ಲಿ ನಡೆದ ಕಳ್ಳತನ ಪ್ರಕರಣವನ್ನ ಕೆಲವೇ ಗಂಟೆಯಲ್ಲಿ ಬೇಧಿಸುವಲ್ಲಿ ತೀರ್ಥಹಳ್ಳಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ