Breaking News

ಮಾದಕ’ ನಟಿಯರು ಜೈಲಿಗೆ ತರಿಸಿಕೊಳ್ತಿದ್ದ ‘ಪಾರ್ಸಲ್’​ಗೆ ಜೈಲು ಸಿಬ್ಬಂದಿ ತಡೆ

Spread the love

ಬೆಂಗಳೂರು: ಇಷ್ಟು ದಿನ ಎಣ್ಣೆ ಸೀಗೆಕಾಯಿಯಂತಿದ್ದ ನಶೆರಾಣಿಯರಾದ ರಾಗಿಣಿ ಮತ್ತು ಸಂಜನಾರ ಕಾಟ ತಾಳಲಾರದೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ಇಬ್ಬರಿಗೂ ಪ್ರತ್ಯೇಕ ಕೊಠಡಿಯ ವ್ಯವಸ್ಥೆ ಮಾಡಿದ್ದರು.

ಇದೀಗ, ಸೈಲೆಂಟಾಗಿದ್ದ ರಾಗಿಣಿ ಮತ್ತೆ ತನ್ನ ಕಿಲಾಡಿ ಬುದ್ಧಿ ತೋರಿದ್ದಾಳೆ. ಬೆನ್ನು ನೋವು ಎಂಬ ನೆಪವೊಡ್ಡಿ ಜೈಲಿನಿಂದ ಹೊರ ಬರಲು ತಂತ್ರ ನಡೆಸುತ್ತಿರುವ ರಾಗಿಣಿ ತಮಗೆ ಬೇಕಾದ ವಸ್ತುಗಳನ್ನು ಕೊರಿಯರ್ ಮೂಲಕ ತರಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಅಂದ ಹಾಗೆ, ತುಪ್ಪದ ಬೆಡಗಿ ತಮ್ಮ ಮನೆಯವರಿಗೆ ಒಂದು ಬಾರಿ ಕರೆ ಮಾಡುತ್ತಾರಂತೆ. ಜೈಲಿನ ಬೂತ್​ನಿಂದ ಕರೆ ಮಾಡಿ ಇಂತಿಂಥ ವಸ್ತುಗಳ ಅಗತ್ಯವಿದೆ ಎಂದು ತಮ್ಮ ಪೋಷಕರಿಗೆ ತಿಳಿಸುತ್ತಾಳಂತೆ. ನಂತರ ಆಕೆಯ ಕುಟುಂಬಸ್ಥರು ರಾಗಿಣಿಯ ಹೆಸರಿಗೆ ಕೊರಿಯರ್ ಮಾಡುತ್ತಾರಂತೆ. ಕೊರಿಯರ್ ಮೂಲಕ ಬಂದರೆ ಆ ವಸ್ತುಗಳನ್ನು ಅಧಿಕಾರಿಗಳು ಜೈಲಿನಲ್ಲಿರುವ ವಿಶೇಷ ಸ್ಕ್ಯಾನರ್ ಮೂಲಕ ಸ್ಕ್ಯಾನ್​ ಮಾಡಿ ನೀಡುತ್ತಾರೆ. ಇದೇ ರೀತಿ, ತನಗೆ ಬೇಕಾದ ಎಲ್ಲಾ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದಾರಂತೆ.

ಅಂತೆಯೇ, ನಿನ್ನೆ ಕುಡಿಯುವ ನೀರಿನ ವಾಟರ್​ ಹೀಟರ್​ ಮೆಷಿನ್​ನ ರಾಗಿಣಿ ತರಿಸಿಕೊಂಡಿದ್ದರಂತೆ. ಆದರೆ, ಸ್ಕ್ಯಾನ್ ವೇಳೆ ಇದು ಬೆಳಕಿಗೆ ಬರುತ್ತಿದ್ದಂತೆ ಅಧಿಕಾರಿಗಳು ಕೊರಿಯರ್​ನ ವಾಪಸ್ ಕಳಿಸಿದ್ದಾರೆ ಎಂದು ತಿಳಿದುಬಂದಿದೆ. ವಿಚಾರಣಾಧೀನ ಕೈದಿಗಳಿಗೆ ಬಟ್ಟೆ ರೀತಿಯ ವಸ್ತುಗಳನ್ನು ನೀಡುವುದಕ್ಕೆ ಮಾತ್ರ ಅವಕಾಶವಿದೆ ಎಂಬ ನಿಯಮದಡಿ ಕೊರಿಯರ್​ಅನ್ನು ಅಧಿಕಾರಿಗಳು ವಾಪಸ್​ ಕಳಿಸಿದ್ದಾರೆ.

ಇತ್ತ ಗಂಡ ಹೆಂಡತಿ ಬೆಡಗಿ ಕಿರಿಕ್ ಸಂಜನಾ ಸ್ಟೈಲ್​ ಕೊಂಚ ಡಿಫರೆಂಟ್. ಸಂಜನಾ ನಿನ್ನೆ ಪೋಷಕರನ್ನು ಜೈಲಿಗೆ ಕರೆಸಿಕೊಂಡಿದ್ದು ಅವರ ಜೊತೆಗೆ ತನಗೆ ಬೇಕಾದ ಕೆಲ ವಸ್ತುಗಳನ್ನೂ ಸಹ ತರಿಸಿಕೊಂಡಿದ್ದರಂತೆ. ಆದರೆ, ತಿಂಡಿ ಹಾಗೂ ಬಟ್ಟೆಗಳನ್ನ ಹೊರತುಪಡಿಸಿ ಜೈಲು ಸಿಬ್ಬಂದಿ ಇತರೆ ವಸ್ತುಗಳನ್ನು ವಾಪಸ್ ಮಾಡಿದ್ದಾರೆ.


Spread the love

About Laxminews 24x7

Check Also

2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ*

Spread the love 2000 ಕೋಟಿ ವೆಚ್ಚದ ಅಭಿವೃದ್ಧಿ ಕೆಲಸಗಳನ್ನು ಹಣವಿಲ್ಲದೆ ಮಾಡಲು ಸಾಧ್ಯವೇ ?: ಮುಖ್ಯಮಂತ್ರಿ ಸಿದ್ದರಾಮಯ್ಯ ಚಿಕ್ಕಬಳ್ಳಾಪುರ(ಶಿಡ್ಲಘಟ್ಟ), …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ