Breaking News

ವರುಣನ ಆರ್ಭಟಕ್ಕೆ ಗೋಡೆ ಗಡಗಡ: ನಡುಗಿದ ಐತಿಹಾಸಿಕ ಸವದತ್ತಿ ಕೋಟೆ

Spread the love

ಬೆಳಗಾವಿ: ಜಿಲ್ಲೆಯಾದ್ಯಂತ ಭಾರಿ ಮಳೆ ಸಂಭವಿಸಿದೆ. ವರುಣನ ಆರ್ಭಟಕ್ಕೆ ಐತಿಹಾಸಿಕ ಸವದತ್ತಿ ಕೋಟೆಯ ಒಂದು ಭಾಗ ಕುಸಿದಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ಪುರಾತನ ನಗರಗಳಲ್ಲಿ ಒಂದು. ಆದರೆ ಮಳೆಯ ಪ್ರಭಾವದಿಂದಾಗಿ ತಮ್ಮ ಧಾರ್ಮಿಕತೆ, ಇತಿಹಾಸ ಸಾರುತ್ತಿದ್ದ ಪುರಾತನ ಕಲೆಗಳಿಗೆ ಹಾನಿಯಾಗುತ್ತಿದೆ.

 18ನೇ ಶತಮಾನದಲ್ಲಿ ಜಯಪ್ಪ ದೇಸಾಯಿಯಿಂದ ನಿರ್ಮಿಸಲ್ಪಟ್ಟ ಸವದತ್ತಿ ಪಟ್ಟಣದಲ್ಲಿರುವ ಕೋಟೆಯ ಒಂದು ಭಾಗದ ಗೋಡೆ ಕುಸಿದಿದೆ.

ಈ ಘಟನೆಯಿಂದಾಗಿ ಕೋಟೆ ಅಕ್ಕಪಕ್ಕದ ಜನರಲ್ಲಿ ಆತಂಕ ಉಂಟಾಗಿದೆ.

ಗೋಡೆ ಕುಸಿಯುವ ಭಯಾನಕ ದೃಶ್ಯ ಮೊಬೈಲ್​ನಲ್ಲಿ ಸೆರೆ‌ಯಾಗಿದೆ. ಸದ್ಯ ಘಟನೆ ಸಂದರ್ಭ ಪ್ರವಾಸಿಗರಾಗಲಿ ನೆರೆಯವರಾಗಲಿ ಹೆಚ್ಚಾಗಿ ಇರದ ಕಾರಣ ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.


Spread the love

About Laxminews 24x7

Check Also

ಶಬರಿಮಲೆ ದೇಗುಲಕ್ಕೆ ಮಹಿಳೆಯರಿಗೆ ಅವಕಾಶ ನೀಡಲ್ಲ: ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಣಯ

Spread the loveತಿರುವಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲಕ್ಕೆ  ಮಹಿಳೆಯರಿಗೆ ಅವಕಾಶ ನೀಡುವುದಿಲ್ಲ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (TDB) ಮಹತ್ವದ ನಿರ್ಣಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ