Breaking News

ಕೊರೊನಾ ವಾರ್ಡಿನಿಂದ ಸೋಂಕಿತ ಗಂಧದ ಕಳ್ಳ ಪರಾರಿ

Spread the love

ಕಾರವಾರ: ಕೊರೊನಾ ಸೋಂಕಿತ ಗಂಧದ ಕಳ್ಳ ಕೋವಿಡ್ ವಾರ್ಡಿನಿಂದ ಪರಾರಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕ್ರಿಮ್ಸ್ ಕೋವಿಡ್ ವಾರ್ಡಿನಲ್ಲಿ ನಡೆದಿದೆ.ಮುಂಡಗೋಡಿನ ನಿವಾಸಿ ಸೈಯದ್ ಇಸ್ರಾಲ್ ಕರೀಮ್ ಕಾನ್ ಕೊರೊನಾ ವಾರ್ಡಿನಿಂದ ತಪ್ಪಿಸಿಕೊಂಡ ಕೋವಿಡ್ ಸೋಂಕಿತ ಕಳ್ಳನಾಗಿದ್ದಾನೆ. ಎರಡು ದಿನದ ಹಿಂದೆ ಮುಂಡಗೋಡಿನಲ್ಲಿ ಗಂಧ ಕಳ್ಳತನ ಮಾಡಿದ ಹಿನ್ನೆಲೆಯಲ್ಲಿ ಈತನನ್ನು ಬಂಧಿಸಲಾಗಿತ್ತು.

ಬಂಧನದ ನಂತರ ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕಾರವಾರದ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕೋವಿಡ್ ವಾರ್ಡಿಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ರಾತ್ರಿ ವಾರ್ಡಿನಿಂದ ಪರಾರಿಯಾಗಿದ್ದು, ಆರೋಪಿಗಾಗಿ ಶೋಧ ನಡೆಸಲಾಗುತಿದೆ. ಈ ಸಂಬಂಧ ಕಾರವಾರನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಜೂನ್ ಒಳಗೆ ಜಿಲ್ಲಾ, ತಾಲೂಕು ಪಂಚಾಯಿತಿ ಚುನಾವಣೆ

Spread the loveಕಾರವಾರ: ಜೂನ್ ಒಳಗೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ