Breaking News

ಕೆ ಕಲ್ಯಾಣ ಪತ್ನಿ ಖಾತೆಯಿಂದ ಸುಮಾರು 19 ಲಕ್ಷ 80 ಸಾವಿರ ವರ್ಗಾವಣೆ

Spread the love

ಬೆಳಗಾವಿ: ಕನ್ನಡ ಚಿತ್ರರಂಗದ ಗಣ್ಯರಿಗೆ ಒಂದಾದ ಮೇಲೊಂದು ಸಂಕಷ್ಟ ಎದುರಾಗುತ್ತಿದೆ. ಖ್ಯಾತ ಕನ್ನಡ ಸಾಹಿತಿ ಕೆ.ಕಲ್ಯಾಣ್ ಅವರ 14 ವರ್ಷದ ಮಧುರ ದಾಂಪತ್ಯವೀಗ ಬೀದಿಗೆ ಬಂದು ನಿಂತಿದೆ. ಇದಕ್ಕೆ ಕಾರಣವೇ ಮಾಟ-ಮಂತ್ರ ಹಾಗೂ ಮನೆ ಕೆಲಸದವಳು ಗಂಗಾ ಹಾಗೂ ಬೆಳಗಾವಿ ಗುರೂಜಿ ಶಿವಾನಂದ ವಾಲಿ ಎಂದು ಖುದ್ದು ಕನ್ನಡ ಚಿತ್ರರಂಗದ ಖ್ಯಾತ ಸಾಹಿತಿ ಕಲ್ಯಾಣ್ ಆರೋಪಿಸಿದ್ದಾರೆ.

ಎಸ್‌ಪಿಬಿ ಬೆಂಗಳೂರಿಗೆ ಬಂದರೆ ತಪ್ಪದೇ ಇವರ ಮನೆಗೆ ಹೋಗುತ್ತಾರಂತೆ!

ಬೆಳಗಾವಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಶಿವಾನಂದ ವಾಲಿ ಹಾಗೂ ಗಂಗಾ ವಿರುದ್ಧ FIR ದಾಖಲಾಗಿದೆ. ಪೊಲೀಸರು ಶಿವಾನಂದ ವಾಲಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಪಡೆದುಕೊಂಡರೆ, ಗಂಗಾ ಕಾಣೆಯಾಗಿದ್ದು, ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ದಾಂಪತ್ಯದ ಬಿರುಕಿನ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದ ಕಲ್ಯಾಣ್, ತಮ್ಮ ಅತ್ತೆ, ಮಾವ ಹಾಗೂ ಪತ್ನಿ ಖಾತೆಯಿಂದ ಸುಮಾರು 19 ಲಕ್ಷ 80 ಸಾವಿರ ವರ್ಗಾವಣೆ ಮಾಡಿಕೊಂಡಿದ್ದಾರೆ, ಎಂದು ಆರೋಪಿಸಿದ್ದಾರೆ.


Spread the love

About Laxminews 24x7

Check Also

ರಾಷ್ಟ್ರಮಟ್ಟದ ಅಣಕು ನ್ಯಾಯಾಲಯ ಸ್ಪರ್ಧೆ

Spread the loveಬೆಳಗಾವಿ : ಟಿಳಕವಾಡಿಯ ಕರ್ನಾಟಕ ಲಾ ಸೊಸೈಟಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದಲ್ಲಿ ಮಾ.13ರಿಂದ 15ರವರೆಗೆ 16ನೇ ಸರಣಿಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ