Breaking News

ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು.

Spread the love

ಬೈಂದೂರು 28 ಸಪ್ಟಂಬರ್: ಗೋಳಿಹೊಳೆ ಗ್ರಾಮದ ಅರೆಶಿರೂರು ರವಿ ಶೆಟ್ಟಿ ಬೈಂದೂರು ಅವರ ಮನೆಯ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವು ಕಾಣಿಸಿಕೊಂಡಿದ್ದು ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಮೀಸಲು ಅರಣ್ಯದಲ್ಲಿ ಬಿಡಲಾಯಿತು.

ಕರ್ನಾಟಕ ಕಾರ್ಮಿಕ ವೇದಿಕೆಯ ರಾಜ್ಯಾಧ್ಯಕ್ಷ ಕಾರ್ಮಿಕ ಮುಖಂಡ ಡಾ.ರವಿ ಶೆಟ್ಟಿ ಬೈಂದೂರು ಅವರ ಮನೆಯ ಅಡಿಕೆ ತೋಟದಲ್ಲಿ ಅವರು ಸಾಕಿದ ನಾಯಿಯನ್ನು ಹಿಡಿದು ನುಂಗುತ್ತಿದ್ದ ಸಂದರ್ಭದಲ್ಲಿ ರವಿ ಶೆಟ್ಟಿಯವರು ಹಾವಿನ ಬಾಯಿಂದ ನಾಯಿಯನ್ನು ಬಿಡಿಸಿದ್ದಲ್ಲದೆ ಸುಮಾರು 20 ಅಡಿ ಉದ್ದ 50ಕೆಜಿಯಷ್ಟು ಭಾರ ಇರುವ ಹಾವನ್ನು ಹಾವಿಗೆ ಯಾವುದೇ ರೀತಿಯ ತೊಂದರೆ ಆಗದ ರೀತಿಯಲ್ಲಿ ಹಿಡಿದು ಗೋಳಿಹೊಳೆ ವಿಭಾಗಿಯ ಪ್ರಭಾರ ಅರಣ್ಯ ರಕ್ಷಕ ರಾಜೀವ ಎಸ್ ಗೌಡರ ಸಹಾಯದೊಂದಿಗೆ ಮೀಸಲು ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

ದೊಡ್ಡಗಾತ್ರದ ಹಾವನ್ನು ಒಬ್ಬರಿಂದ ಎತ್ತಿ ಹಿಡಿಯುವುದು ಆಗದಿದ್ದಾಗ ಅರಣ್ಯ ಇಲಾಖೆಯವರಿಗೆ ತಿಳಿಸಿದ ತಕ್ಷಣ ಸಮೀಪದಲ್ಲೇ ಇದ್ದ ಅರಣ್ಯ ರಕ್ಷಕರಾದ ರಾಜೀವ್ ಎಸ್ ಗೌಡರು ಮತ್ತು ಸಹಾಯಕರಾದ ನಾರಾಯಣ ಗೌಡರು ಆಗಮಿಸಿ ಸಹಕರಿಸಿದರು.. ಇಂದು ಬೆಂಗಳೂರಿನಿಂದ ಬಂದು ಹತ್ತೇ ನಿಮಿಷದಲ್ಲಿ ಈ ಘಟನೆ ನಡೆದಿದ್ದು ಇನ್ನು ಎರಡೇ ನಿಮಿಷ ಕಳೆದಿದ್ದರು ಹಾವು ನಾಯಿಯನ್ನು ನುಂಗುತ್ತಿತ್ತು ಮತ್ತು ಅಕ್ಕಪಕ್ಕದ ಮನೆಯವರು ಮತ್ತು ಮಕ್ಕಳು ಓಡಾಡುವ ಸ್ಥಳ ಆಗಿರುವುದರಿಂದ ಹಾವನ್ನು ಜಾಗೃಕತೆ ಯಿಂದ ಹಿಡಿದು ಅರಣ್ಯ ಇಲಾಖೆ ಅದರೊಂದಿಗೆ ಮೀಸಲು ಅರಣ್ಯದಲ್ಲಿ ಬಿಡಲಾಗಿದೆ ಇದನ್ನು ಹಿಡಿಯುವುದು ತಕ್ಷಣಕ್ಕೆ ನಮಗೆ ದೊಡ್ಡ ಸವಾಲಾಗಿತ್ತು ಎಂದು ತನ್ನ ಅನುಭವವನ್ನು ಹಂಚಿಕೊಂಡರು.


Spread the love

About Laxminews 24x7

Check Also

ತಗಡಿನ ಮನೆಗೆ ಬೆಂಕಿ; ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಗೃಹೋಪಯೋಗಿ ವಸ್ತುಗಳು

Spread the loveಗದಗ: ತಗಡಿನ ಮನೆಗೆ ಬೆಂಕಿ ಕಾಣಿಸಿಕೊಂಡು ಕ್ಷಣಾರ್ಧದಲ್ಲಿ ಸುಟ್ಟು ಕರಕಲಾದ ಘಟನೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ