Breaking News

ಅಸಂಸದೀಯ ಪದ ಬಳಕೆ: ರಮೇಶ್‌ ಕುಮಾರ್‌- ಸುಧಾಕರ್ ಜಟಾಪಟಿ

Spread the love

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹಾಗೂ ಕಾಂಗ್ರೆಸ್‌ನ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ಮಧ್ಯದ ಜಟಾಪಟಿಗೆ ವಿಧಾನಸಭೆ ಬುಧವಾರ ಸಾಕ್ಷಿಯಾಯಿತು.

ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ಉತ್ತರ ನೀಡಿದ ಸುಧಾಕರ್‌, ‘ಸಚಿವರನ್ನು ಒಳಗೊಂಡ ಕಾರ್ಯಪಡೆ ಸಭೆಯಲ್ಲಿ ಚರ್ಚಿಸಿ ಪಿಪಿಇ ಕಿಟ್‌ಗಳ ಖರೀದಿ ಮಾಡಲಾಗುತ್ತಿದೆ’ ಎಂದರು.

ಆಗ ಎದ್ದು ನಿಂತ ರಮೇಶ್‌ ಕುಮಾರ್‌, ‘ಪಿಪಿಇ ಕಿಟ್‌ಗಳ ಖರೀದಿ ದರದ ಏರಿಳಿತವನ್ನು ಸಚಿವರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಮೊದಲು ಕಿಟ್‌ಗಳನ್ನು ₹300ಕ್ಕೆ ಖರೀದಿಸಿದೆವು. ಆ ಬಳಿಕ ಬೆಲೆ ಹೆಚ್ಚಾಯಿತು. ವಿವಿಧ ಸಮಿತಿಗಳು ಪರಿಶೀಲಿಸಿವೆ ಎನ್ನುತ್ತಿದ್ದಾರೆ. ಈ ಸಮಿತಿಯಲ್ಲಿ ಬೃಹಸ್ಪತಿಗಳಿದ್ದಾರೆ.


Spread the love

About Laxminews 24x7

Check Also

ಯತ್ನಾಳ್ ಮತ ಅಸಿಂಧು ಆಕ್ಷೇಪ ತಿರಸ್ಕಾರ – ಮತಗಟ್ಟೆಯಲ್ಲಿ ಉಲ್ಲಂಘನೆ ಆಗಿಲ್ಲ ಎಂದ ಚುನಾವಣಾಧಿಕಾರಿ

Spread the loveಬೆಂಗಳೂರು: ಬಿಜೆಪಿ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌  ಅವರ ಮತವನ್ನು ಅಸಿಂಧುಗೊಳಿಸಬೇಕೆಂಬ ಕಾಂಗ್ರೆಸ್‌ ಆಕ್ಷೇಪವನ್ನ ಚುನಾವಣಾಧಿಕಾರಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ