Breaking News

ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ್ತಿದ್ದ ಯುವಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಪೇದೆಗೆ ಹಲ್ಲು ಮುರಿಯುವಂತೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.

Spread the love

ಬೆಂಗಳೂರು: ಕಾನೂನು ಪಾಲನೆ ಮಾಡಿ ಅನ್ನೋದೆ ತಪ್ಪಾಗಿ ಹೋಗಿದೆ. ಹೆಲ್ಮೆಟ್ ಇಲ್ಲದೆ ವಾಹನ ಚಲಾಯಿಸ್ತಿದ್ದ ಯುವಕನನ್ನ ಪ್ರಶ್ನೆ ಮಾಡಿದ್ದಕ್ಕೆ ಪೊಲೀಸ್ ಪೇದೆಗೆ ಹಲ್ಲು ಮುರಿಯುವಂತೆ ಹಲ್ಲೆ ಮಾಡಿದ್ದ ಆರೋಪಿಯನ್ನು ಬಂಧಿಸಲಾಗಿದೆ.ಹೆಲ್ಮೆಟ್ ಧರಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಸಂಚಾರಿ ಪೇದೆ ಮೇಲೆ ಹಲ್ಲೆ ಮಾಡಿದ್ದ ವಿಜಯ್ ತರುಣ್ (21) ಬಂಧನ ಮಾಡಲಾಗಿದೆ. ಮಂಗಳವಾರ ಸಂಜೆ 5:30 ರ ಸುಮಾರಿಗೆ ತನ್ನ ಗೆಳೆಯನೊಂದಿಗೆ ಬರುತ್ತಿದ್ದ ಆರೋಪಿ ವಿಜಯ್ ತರುಣ್ ನನ್ನ ಪೊಲೀಸರು ತಡೆದಿದ್ದರು.ಈ ವೇಳೆ ಹೆಲ್ಮೆಟ್ ಧರಿಸದೇ ಇರುವುದನ್ನು ಪ್ರಶ್ನಿಸಿದ್ದಕ್ಕೆ ಅಶ್ಲೀಲವಾಗಿ ಕೈ ತೋರಿಸಿ ಹಲ್ಲೆ ಮಾಡಿದ್ದ. ಹೈಗ್ರೌಂಡ್ಸ್ ಸಂಚಾರಿ ಠಾಣೆ ಪೇದೆ ರಮೇಶ್ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದ. ಹಲ್ಲೆಯಿಂದಾಗಿ ಪೊಲೀಸ್ ಪೇದೆಯ ಹಲ್ಲಿನ ಚಿಪ್ಪು ಮುರಿದಿತ್ತು. ಈ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ರಮೇಶ್ ದೂರಿನ ಆಧಾರದ ಮೇಲೆ ಆರೋಪಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.


Spread the love

About Laxminews 24x7

Check Also

ಪರಿಷ್ಕೃತ ಕೈಗಾರಿಕಾ ತುಟ್ಟಿಭತ್ಯೆ ಶೀಘ್ರ ಜಮೆಗೆ ನಿವೃತ್ತರಾದ ಪಿಂಚಣಿದಾರರ ಆಗ್ರಹ

Spread the loveಬೆಳಗಾವಿ: ಬಿಎಸ್‌ಎನ್‌ಎಲ್ ಮತ್ತು ಎಂಟಿಎನ್‌ಎಲ್‌ನಿಂದ ನಿವೃತ್ತರಾದ ಪಿಂಚಣಿದಾರರಿಗೆ ಸರ್ಕಾರದಿಂದ ಬರಬೇಕಿರುವ ಪರಿಷ್ಕೃತ ಕೈಗಾರಿಕಾ ತುಟ್ಟಿಭತ್ಯೆ ಶೀಘ್ರ ಜಮೆ ಮಾಡುವಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ