Breaking News

ಹಿರಿಯ ನಾಯಕರ ಮೇಲೆ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಕಿಡಿ

Spread the love

ಬೆಂಗಳೂರು, ಆ.24- ರಾಹುಲ್ ಗಾಂಧಿ ಅವರ ವಿರುದ್ಧದ ಪತ್ರವನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಿದ ಹಿರಿಯ ನಾಯಕರ ಮೇಲೆ ಚಿತ್ರ ನಟಿ, ಮಾಜಿ ಸಂಸದೆ ರಮ್ಯಾ ಕಿಡಿಕಾರಿದ್ದಾರೆ.

ಪತ್ರವೊಂದನ್ನು ಸೋರಿಕೆ ಮಾಡುವ ಮೂಲಕ ಮಾಧ್ಯಮಗಳಿಗೆ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯ ಪ್ರತಿನಿಮಿಷದ ಬೆಳವಣಿಗೆಗಳನ್ನು ಚರ್ಚಿಸಲು ಆಹಾರ ಒದಗಿಸಿದ್ದಾರೆ ಅದ್ಭುತ ಎಂದು ರಮ್ಯ ವ್ಯಂಗ್ಯವಾಡಿದ್ದಾರೆ.

ನಿನ್ನೆಯಿಂದ ಕಾಂಗ್ರೆಸ್ ಬೆಳವಣಿಗೆಗಳು ತೀವ್ರ ಚರ್ಚೆಗೆ ಗ್ರಾಸವಾಗಿವೆ.2019ರ ಜುಲೈನಿಂದ 2020ರ ಆಗಸ್ಟ್ 18ರವರೆಗೆ ಟ್ವಿಟರ್‍ನಿಂದ ದೂರವಿದ್ದ ರಮ್ಯಾ ಅವರು ಇದ್ದಕ್ಕಿದ್ದ ಹಾಗೇ ಕ್ರಿಯಾಶೀಲರಾಗಿದ್ದಾರೆ. ಫೇಸ್‍ಬುಕ್‍ನಲ್ಲೂ ಹೆಚ್ಚು ಆಕ್ಟಿವ್ ಆಗಿದ್ದಾರೆ.

ಹಿರಿಯ ನ್ಯಾಯವಾದಿ ಪ್ರಶಾಂತ್ ಭೂಷಣ್ ಸುಪ್ರೀಂಕೋರ್ಟ್ ಬಗ್ಗೆ ಮಾಡಿರುವ ಟ್ವಿಟ್ ಅನ್ನು ರಮ್ಯಾ ರಿಟ್ವಿಟ್ ಮಾಡಿದ್ದಾರೆ. ಇತ್ತೀಚೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಫೇಸ್‍ಬುಕ್‍ನಲ್ಲಿ ಬರೆದ ಪತ್ರವನ್ನು ರಾಹುಲ್ ಗಾಂ ಪೋಸ್ಟ್ ಮಾಡಿದ್ದರು. ರಮ್ಯಾ ಅದನ್ನು ರಿಟ್ವಿಟ್ ಮಾಡಿದ್ದರು.


Spread the love

About Laxminews 24x7

Check Also

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Spread the loveಬೆಂಗಳೂರು: ರಾಜ್ಯಕ್ಕೆ ಈ ಬಾರಿ ಮುಂಗಾರು ಆತಂಕ ದೊಡ್ಡ ಮಟ್ಟದಲ್ಲಿ ತಟ್ಟಲಿದೆ. ವಾಡಿಕೆಗಿಂತ ಈ ಬಾರಿ ಮಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ