Breaking News

ಗಲಭೆ: ಮತ್ತೆ ಮಂದಿ ಅರೆಸ್ಟ್ – ತನಿಖೆಯಲ್ಲಿ ಬಯಲಾಯ್ತು ಫೇಸ್ ಬುಕ್ ಪೋಸ್ಟ್ ರಹಸ್ಯ

Spread the love

ಬೆಂಗಳೂರು: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಯ ಜಾಡನ್ನ ಹಿಡಿದು ಹೊರಟಿರೋ ಸಿಸಿಬಿ ಅಧಿಕಾರಿಗಳು ಪ್ರಕರಣದ ಪ್ರಮುಖ ಆರೋಪಿಗಳ ಬೆಂಡೆತ್ತುತ್ತಿದ್ದಾರೆ. ಹೀಗಿದ್ದೂ ಕೆಲವು ಆರೋಪಿಗಳಿಗೆ ಇರುವ ಕೊಬ್ಬು, ಧಿಮಾಕು ಕಡಿಮೆ ಆಗಿಲ್ಲ.

ಅಖಂಡ ಶ್ರೀನಿವಾಸಮೂರ್ತಿ ಅಳಿಯ ಹಾಗೂ ಗಲಭೆಯ ಪ್ರಮುಖ ಆರೋಪಿ ನವೀನ್ ಮನೆಗೆ ಬೆಂಕಿ ಇಟ್ಟ ಆರೋಪಿಯನ್ನ ಸಿಸಿಬಿ ಇಂದು ಬಂಧಿಸಿದೆ. ಯೂಸುಫ್ ಬಂಧಿತ ಆರೋಪಿ. ಈತ ಗಲಾಟೆ ನಡೆದ ದಿನ ನವೀನ್ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ. ಮನೆಯಲ್ಲಿದ್ದ ವಸ್ತುಗಳನ್ನ ಚೆಲ್ಲಾಪಿಲ್ಲಿಯಾಗಿ ಎಸೆದು ಬೆಂಕಿ ಹಾಕಿ ಆಸ್ತಿ-ಪಾಸ್ತಿಗೆ ಹಾನಿಯುಂಟು ಮಾಡಿದ್ದ. ಈ ಹಿನ್ನೆಲೆಯಲ್ಲಿ ಆತನನ್ನ ಪೊಲೀಸ್ ಅಧಿಕಾರಿಗಳು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ.

ಆರೋಪಿ ಯೂಸುಫ್​​ನನ್ನ ಠಾಣೆಗೆ ಕರೆದುಕೊಂಡು ಬಂದ ವೇಳೆ ಮಾಧ್ಯಮಗಳ ಮಂದೆ ಪ್ಯಾಂಟ್​ನ ಜಿಪ್​​ ತೆಗೆದಿದ್ದಾನೆ.

ಜಿಪ್ ಬಿಚ್ಚಿ ರೆಕಾರ್ಡ್​​ ಮಾಡಿಕೊಳ್ಳುವಂತೆ ಸನ್ನೆ ಮಾಡಿ ಅನುಚಿತ ವರ್ತನೆ ತೋರಿಸಿದ್ದಾನೆ.


Spread the love

About Laxminews 24x7

Check Also

ಮೂರು ಮಕ್ಕಳ ತಾಯಿಯನ್ನು ಕತ್ತು ಸೀಳಿ ಕೊಂದ ಪ್ರಿಯಕರ

Spread the loveದಾವಣಗೆರೆ: ವ್ಯಕ್ತಿಯೊಬ್ಬ ಪ್ರಿಯತಮೆಯ ಕತ್ತು ಸೀಳಿ ಹತ್ಯೆಗೈದ  ಘಟನೆ ದಾವಣಗೆರೆಯ  ಶೇಖರಪ್ಪ ನಗರದಲ್ಲಿ ನಡೆದಿದೆ. ನಾಗರತ್ನ (45) …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ